ನ್ಯೂಸ್

ಭಾರತದಲ್ಲಿ ಮತ್ತೊಬ್ಬ ಜಿನ್ನಾ ಹುಟ್ಟಲು ಬಿಡುವುದಿಲ್ಲ; ಜಿನ್ನಾ ಹುಟ್ಟಿದ್ದರೆ, ಅವರನ್ನು ಸಮಾಧಿ ಮಾಡಲಾಗುತ್ತದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್ | Yogi Adityanath

ಲಖನೌ: ಭಾರತದಲ್ಲಿ ಮಾತ್ತೊಬ್ಬ ಜಿನ್ನಾ ಹುಟ್ಟದಂತೆ ನಾವು ನೋಡಿಕೊಳ್ಳಬೇಕು. ಅಲ್ಲದೆ, ಒಬ್ಬರು ಜನಿಸಿದರೆ, ಅವರನ್ನು ಸಮಾಧಿ ಮಾಡಬೇಕು, ದೇಶವು ಮತ್ತೊಂದು ವಿಭಜನೆಯನ್ನು ಎದುರಿಸದಂತೆ ನಾವು ಜಾಗರೂಕರಾಗಿರಬೇಕು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಸೋಮವಾರ (ನ.10) ಹೇಳಿದ್ದಾರೆ.

ಈ ಬಗ್ಗೆ ಉತ್ತರ ಪ್ರದೇಶದ ಏಕತಾ ಯಾತ್ರೆಯಲ್ಲಿ ಮಾತನಾಡಿದ ಯೋಗಿ, ದೇಶದಲ್ಲಿ ಭಾಷೆ ಮತ್ತು ಜಾತಿಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ರಾಷ್ಟ್ರಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮುಂದುವರೆದು ಮಾತನಾಡಿದ ಯೋಗಿ, ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಹಾಡನ್ನು ಹಾಡುವುದು ಇನ್ನು ಮುಂದೆ ಕಡ್ಡಾಯವಾಗಲಿದೆ ಎಂದು ಘೋಷಿಸಿದ್ದಾರೆ. ರಾಷ್ಟ್ರದದ್ಯಾಂತ ಬ್ರಿಟಿಷರ ಅಡಿಪಾಯವನ್ನೇ ಅಲುಗಾಡಿಸಿದ್ದ ಇದೇ ವಂದೇ ಮಾತರಂ ಹಾಡನ್ನು ಜಿನ್ನಾ ವಿರೋಧಿಸಿದ್ದರು ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಜಿನ್ನಾರನ್ನು ವಿರೋಧಿಸಿದ್ದರೆ, ದೇಶ ವಿಭಜನೆಯಾಗುತ್ತಿರಲಿಲ್ಲ ಎಂದಿದ್ದಾರೆ.

ಅದರೆ, ಮತ್ತೆ ಭಾರತದಲ್ಲಿ ಮತ್ತೊಬ್ಬ ಜಿನ್ನಾ ಹುಟ್ಟಲು ಬಿಡುವುದಿಲ್ಲ. ಜಿನ್ನಾ ಹುಟ್ಟಿದ್ದರೆ, ಅವರನ್ನು ಸಮಾಧಿ ಮಾಡಲಾಗುತ್ತಿತ್ತು. ಅಲ್ಲದೆ, ಸಿಎಂ ಯೋಗಿ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸರ್ದಾರ್ ಪಟೇಲ್ ಎಲ್ಲಾ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿದರು, ಆದರೆ ಕಾಂಗ್ರೆಸ್ ಅವರಿಗೆ ಅರ್ಹವಾದ ಗೌರವವನ್ನು ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರದಲ್ಲಿ ಭಾಷೆ ಮತ್ತು ಜಾತಿಯ ಆಧಾರದ ಮೇಲೆ ನಮ್ಮನ್ನು ವಿಭಜಿಸಲು ಪಿತೂರಿ ನಡೆಯುತ್ತಿದೆ. ಆದರೆ ನಾವು ವಿಭಜನೆಯಾಗುವುದಿಲ್ಲ ಎಂಬ ಸಂದೇಶವನ್ನು ಸಿಎಂ ಯೋಗಿ ಬಿಹಾರಕ್ಕೆ ಕಳುಹಿಸಿದ್ದಾರೆ. ದೇಶದಲ್ಲಿ ಜಿನ್ನಾ ವಿಭಜಕ ಚಿಂತನೆಯನ್ನು ಉಲ್ಲೇಖಿಸುವ ಮೂಲಕ ಬಿಹಾರದ ಮತದಾರರಿಗೆ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಿಎಂ ಯೋಗಿ ನೀಡಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಬಿಜೆಪಿ ರಾಷ್ಟ್ರೀಯ ಏಕತಾ ಮೆರವಣಿಗೆಯನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 8 ಕಿಲೋಮೀಟರ್ ಮೆರವಣಿಗೆಯನ್ನು ಕೈಗೊಳ್ಳಲಿದ್ದಾರೆ. ಅಲ್ಲದೆ, ಗೋರಖ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಏಕತಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.(ಏಜೆನ್ಸೀಸ್)