ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟಾಲಿವುಡ್ನ ಸೂಪರ್ ಹಿಟ್ ಡಿಜೆ ಟಿಲ್ಲು ಸಿನಿಮಾದ ಸೀಕ್ವೇಲ್ ಟಿಲ್ಲು ಸ್ಕ್ವೇರ್ನ ಟ್ರೇಲರ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಅನಪಮಾ ಪರಮೇಶ್ವರನ್, ನಟ ಸಿದ್ದು ಜತೆಗೆ ಲಿಪ್ ಲಾಕ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಹಾಗೂ ಅಭಿಮಾನಿಗಳ ಅತೀವ ಬೇಸರಕ್ಕೆ ಕಾರಣರಾಗಿದ್ದಾರೆ.
ಇದನ್ನೂ ಓದಿ: ಮಹಿಳಾ ಟಿ20 ಹಬ್ಬಕ್ಕೆ ವೇದಿಕೆ ಸಜ್ಜು; ಇಂದಿನಿಂದ ಬೆಂಗಳೂರಿನಲ್ಲಿ ಡಬ್ಲುಪಿಎಲ್; ಮುಂಬೈ-ಡೆಲ್ಲಿ ಮೊದಲ ಪಂದ್ಯ
ಟಿಲ್ಲು ಸ್ಕ್ವೇರ್ ಚಿತ್ರದ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟ್ರೇಲರ್‌ನಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ತುಂಬಾ ಹಾಟ್ ಲುಕ್ನಲ್ಲಿ ಕಂಗೊಳಿಸಿದ ದೃಶ್ಯ ಸದ್ಯ ಅಪಾರ ಸಂಖ್ಯೆಯ ಅಭಿಮಾನಿಗಳ ಹೃದಯ ಹೊಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ, ಅನುಪಮಾ ಲಿಪ್‌ಲಾಕ್ ಸೀನ್ನಲ್ಲಿ ನಟಿಸಿದ್ದಾರೆ. ಇದನ್ನು ನೋಡಿದ ಅನುಪಮಾ ಫ್ಯಾನ್ಸ್ ತುಂಬಾ ಬೇಸರಗೊಂಡಿದ್ದು, ಹಳೆಯ ಅನುಪಮಾ ಬೇಕಿತ್ತು. ನೀವು ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳನ್ನು ಕಳೆದುಕೊಂಡಿದ್ದೀರಿ ಎಂದೆಲ್ಲಾ ಕಮೆಂಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು.
ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯಿಸದ ನಟಿಗೆ ಬೆಂಬಿಡದೆ ಕಾಡುತ್ತಿರುವುದು ಅಭಿಮಾನಿಗಳ ಕಮೆಂಟ್ಗಳು! ಹಾಟ್ ಹಾಗೂ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡ ನಟಿಯ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಫ್ಯಾನ್ಸ್, ಅನುಪಮಾ ಹುಟ್ಟುಹುಬ್ಬದ ದಿನ ಕೂಡ ಅವರ ಫೋಟೋ ಕೆಳಗೆ ನಮಗೆ ಹಳೇ ಅನುಪಮಾ ಬೇಕು, ಮಿಸ್ಸಿಂಗ ಓಲ್ಡ್ ಅನುಪಮಾ ಎಂದೆಲ್ಲಾ ಕಮೆಂಟ್ ಮಾಡಿ, ಅತೀವ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಸಲಿಗೆ ಟ್ರೇಲರ್‌ನಲ್ಲಿ ಬಂದ ಲಿಪ್‌ಲಾಕ್ ದೃಶ್ಯ ಸಿನಿಮಾದ ಇನ್ನು ಯಾವ ಸೀನ್ಗಳಲ್ಲಿ ಇರಬಹುದು? ನಟಿ ಹೆಚ್ಚಾಗಿ ಬೋಲ್ಡ್ ಅವತಾರದಲ್ಲೇ ಕಾಣಿಸಿಕೊಳ್ಳುತ್ತಾರಾ ಎಂಬ ಹಲವಾರು ಗೊಂದಲಗಳು ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿದ್ದು. ಈ ಪ್ರಶ್ನೆಗಳಿಗೆ ಸಿನಿಮಾ ಬಿಡುಗಡೆಯ ನಂತರ ಉತ್ತರ ಸಿಗಲಿದೆ ಎಂದೇ ಹೇಳಬಹುದು,(ಏಜೆನ್ಸೀಸ್).