Russia-India: ಭಾರತ ಮತ್ತು ಅಮೆರಿಕ ನಡುವೆ ಪ್ರಸ್ತುತ ಉದ್ವಿಗ್ನ ವಾತಾವರಣವಿದೆ. ಉಭಯ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ. ಇದಕ್ಕೆ ಕಾರಣ ಟ್ರಂಪ್, ಭಾರತದ ಮೇಲೆ ಹೇರಿರುವ ಅತ್ಯಧಿಕ ಸುಂಕ. ರಷ್ಯಾದ ಜತೆ ತೈಲ ಖರೀದಿ ಮಾಡುತ್ತಿರುವುದಕ್ಕೆ ದಂಡನೆಯಾಗಿ ಸುಂಕ ಹೇರಿದ್ದಾರೆ. ಈ ಎಲ್ಲದರ ನಡುವೆ ಇತ್ತೀಚಿಗೆ ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತ-ರಷ್ಯಾ- ಚೀನಾ ಅಮೆರಿಕಕ್ಕೆ ಸವಾಲಿಗೆ ನಿಂತಿವೆ. ಇದು ದೊಡ್ಡಣ್ಣನ(ಟ್ರಂಪ್) ನಿದ್ದೆಗೆಡಿಸಿದೆ ಎಂದು ವಿಶ್ಲೇಷಿಸಲಾಗಿತ್ತಿದೆ. ಇದೀಗ ಶೃಂಗಸಭೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೌನಮುರಿದ್ದಾರೆ.
ಇದನ್ನೂ ಓದಿ:ಸಚಿನ್ ಒಬ್ಬರೇ ನನ್ನ ಮಗನಿಗೆ…! ಕೊಹ್ಲಿ, ಧೋನಿ ಬೆನ್ನಿಗೆ ಚೂರಿ ಹಾಕಿದವರು: ಯುವಿ ತಂದೆ ಗಂಭೀರ ಆರೋಪ | Yograj Singh
ಅಮೆರಿಕವು ಭಾರತ ಮತ್ತು ರಷ್ಯಾವನ್ನು "ಅತ್ಯಂತ ಆಳವಾದ ಮತ್ತು ಕತ್ತಲೆಯಾದ ಚೀನಾಕ್ಕೆ "ಕಳೆದುಕೊಂಡಿದೆ" ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
SCO ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇರುವ ಫೋಟೋವನ್ನು ಟ್ರಂಪ್ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮತ್ತು "ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಆಳವಾದ, ಕತ್ತಲೆಯಾದ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ.(ಚೀನಾಕ್ಕೆ ಬಿಟ್ಟು ಕೊಟ್ಟೆವೆ) ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ!" ಎಂದು ಬರೆದಿದ್ದಾರೆ.
ಇದೀಗ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಹೇಳಿಕೆಗಳಿಂದ ಈ ಹೇಳಿಕೆಯೂ ಯೂ-ಟರ್ನ್ ಆಗಿ ಬಂದಿದೆ. ಅಲ್ಲಿ ಅವರು ತಮ್ಮ ಸುಂಕಗಳಿಂದಾಗಿ ಅಮೆರಿಕ ವಿರೋಧಿ ಪಕ್ಷವು ರೂಪುಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದರು. ಸುಂಕಗಳನ್ನು ಹೆಚ್ಚಿಸಿದ ಒತ್ತಡದಿಂದಾಗಿ ಭಾರತ ಅಮೆರಿಕಕ್ಕೆ "ಶೂನ್ಯ ಸುಂಕ"ವನ್ನು ನೀಡಿದೆ ಎಂದು ಹೇಳಿಕೊಳ್ಳುತ್ತಾರೆ.(ಏಜೆನ್ಸೀಸ್)