ಹಾಸನ: ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಹಾಸನ ಜಿಲ್ಲೆಯ ಎಲ್ಲಾ ಕೆಲಸಗಳನ್ನು ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಹಾಸನಕ್ಕೆ ಬಸ್ ನಿಲ್ದಾಣ ಕೊಟ್ಟಿದ್ದು ನಾವೇ ಎಂಬ ಕಂದಾಯ ಸಚಿವ ಅಶೋಕ್ ಹೇಳಿಕೆ ಹಿನ್ನೆಲೆ ಹಾಸನದಲ್ಲಿ ಪ್ರಕ್ರಿತಿಯಿಸಿದ ಅವರು, ಹಾಸನ ಬಸ್ ನಿಲ್ದಾಣವನ್ನು ಮಂಜೂರು ಮಾಡಿದ್ದೇ ದೇವೇಗೌಡ್ರು ಮಗ ರೇವಣ್ಣ. ರೆಡಿ ಮಾಡಿ ಇಟ್ಟಿದ್ದ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದು ಅಶೋಕ್ ಅವರು ಅದನ್ನೇ ಅವರೇ ಮಾಡಿದ್ದು ಎಂದು ಬಿಂಬಿಸಿದ್ದಾರೆ ಎಂದರು.
ಅಶೋಕ್ ಅವರೇ ಬಸ್ ಸ್ಟ್ಯಾಂಡ್ ಮಂಜೂರು ಮಾಡಿಸಿದ್ದು ಅಂತಾ ದಾಖಲೆ ತೋರಿಸಿದರೆ. ಇಂದೇ ರಾಜೀನಾಮೆ ಕೊಟ್ಟು ಹೋಗ್ತಿನಿ ಎಂದು ಹೇಳಿದರು.
ಕಾಫಿ ಬೆಳೆಗಾರರ ಸಮಾವೇಶ ಮಾಡ್ತಿದ್ದಾರೆ.ಇಲ್ಲಿಯವರೆಗೆ ಯಾವ ಕಾಫಿ ಬೆಳೆಗಾರರ ಸಾಲ ಮನ್ನಾ ಆಗಿದೆ ಎಂದು ಹೇಳಲಿ ಎಂದ ಅವರು, ಕಂದಾಯ ಮಂತ್ರಿಗಳು ದಯವಿಟ್ಟು ಕಡತ ತೆಗೆದು ನೋಡಬೇಕು ಎಂದರು.
2023ರಲ್ಲಿ ನಡೆಯುವ ಎಲೆಕ್ಷನ್ ಇರಲಿ ಇವರ ಯೋಗ್ಯತೆಗೆ ಕಾರ್ಪೋರೇಷನ್ ಎಲೆಕ್ಷನ್ ನಡೆಸೋಕೆ ಇದುವರೆಗೂ ಆಗಿಲ್ಲ. ಅಲ್ಲದೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲೆಕ್ಷಗಳನ್ನೂ ಮಾಡೋದಕ್ಕೆ ಆಗುತ್ತಿಲ್ಲ ಎಂದು ಹೇಳಿದರು.