ನ್ಯೂಸ್

ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವಾಗ ಯಾವುದೇ ಕಾರಣಕ್ಕೂ ಈ ಮಿಸ್ಟೇಕ್​ ಮಾಡ್ಬೇಡಿ: ಮಾಡಿದ್ರೆ ಆರೋಗ್ಯಕ್ಕೆ ಅಪಾಯ! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ ಜನರು ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲು ಮತ್ತು ಶಾಖದಿಂದಾಗಿ ಅನೇಕರು ತೀವ್ರ ಬಳಲಿಕೆಯನ್ನು ಅನುಭವಿಸುತ್ತಿದ್ದಾರೆ. ಬಿಸಿಲಿನ ಶಾಖವನ್ನು ನಿಭಾಯಿಸಲು ಬಹುತೇಕರು ಎಸಿ ಮತ್ತು ಕೂಲರ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.

ಆರೋಗ್ಯ ತಜ್ಞರ ಸಲಹೆಯ ಪ್ರಕಾರ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕೆಲವು ಹಣ್ಣುಗಳನ್ನು ಸೇವಿಸುವುದು ಸಹ ಬಹಳ ಮುಖ್ಯ. ಇದಕ್ಕೆ ಕಲ್ಲಂಗಡಿ ಒಂದು ಉತ್ತಮ ಆಯ್ಕೆ. ಕಲ್ಲಂಗಡಿ ಹಣ್ಣು ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸುತ್ತದೆ ಮತ್ತು ದೇಹವನ್ನು ಹೈಡ್ರೇಟ್​ ಆಗಿ ಇಡುತ್ತದೆ.

ಅನೇಕ ಜನರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಇರಿಸಿ ಮತ್ತೆ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದಾಗ್ಯೂ, ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಟ್ಟು ಕಲ್ಲಂಗಡಿ ತಿನ್ನುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕಲ್ಲಂಗಡಿ ಶೇ. 90 ರಷ್ಟು ನೀರಿನಿಂದ ಕೂಡಿದ್ದು, ಹೆಚ್ಚಿನ ತೇವಾಂಶವನ್ನು ಹೊಂದಿದೆ. ಫ್ರಿಡ್ಜ್‌ನಲ್ಲಿ ಹೆಚ್ಚಿನ ಆರ್ದ್ರತೆ ಇರುವುದರಿಂದ ಈ ತೇವಾಂಶವು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಆಹಾರ ವಿಷವಾಗುವ ಸಾಧ್ಯತೆಯೂ ಇದೆ.

ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟು ಕಲ್ಲಂಗಡಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದು ಚರ್ಮದ ಸಮಸ್ಯೆಗಳು, ಅಲರ್ಜಿಗಳು, ಕೂದಲು ಉದುರುವಿಕೆ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಕತ್ತರಿಸಿದ ತಕ್ಷಣ ಕಲ್ಲಂಗಡಿ ತಿನ್ನುವುದು ಉತ್ತಮ.

ಇನ್ನು ಕಲ್ಲಂಗಡಿ ಹಣ್ಣನ್ನು ತಾಜಾ ತಿನ್ನುವುದು ಉತ್ತಮ. ಕಲ್ಲಂಗಡಿ ಹಣ್ಣನ್ನು ಕತ್ತರಿಸುವ ಮೊದಲು, ನಿಮ್ಮ ಕೈಗಳನ್ನು ಮತ್ತು ನೀವು ಬಳಸುವ ಚಾಕುವನ್ನು ತೊಳೆಯಿರಿ. ಖರೀದಿಸುವ ಮೊದಲು, ನೈಸರ್ಗಿಕ, ಉತ್ತಮ ಗುಣಮಟ್ಟದ ಕಲ್ಲಂಗಡಿಯನ್ನು ಆರಿಸಿ. ದೀರ್ಘಕಾಲದವರೆಗೆ ಹೊರಗೆ ಬಿಟ್ಟ ಕಲ್ಲಂಗಡಿಗಳನ್ನು ತಿನ್ನುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವೂ ಇದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.