ನ್ಯೂಸ್

ಪಾಕ್​ ಜತೆ ಏನಿದ್ರೂ POK ಬಗ್ಗೆ ಮಾತ್ರ ಮಾತುಕತೆ : ಪ್ರಧಾನಿ ಮೋದಿ ಗುಡುಗು

POK:''ಪಾಕಿಸ್ತಾನ ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸಬೇಕು. ಶಾಂತಿಗೆ ಬೇರೆ ದಾರಿಯಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲವೋ ಹಾಗೆಯೇ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ, ಅವರ ಹತ್ತಿರ ಮಾತುಕತೆ ಪಿಒಕೆ ಬಗ್ಗೆ ಮಾತ್ರ. POK ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮಾನಾಡಿದರು. ಇನ್ನು ಮುಂದೆ ಯಾವುದೇ ಪರಮಾಣು ಬೆದರಿಕೆಯನ್ನು ಸಹಿಸಲಾಗುವುದಿಲ್ಲ. ಭಾರತದ ಮೇಲಿನ ಭಯೋತ್ಪಾದಕ ದಾಳಿಗೆ ಸೂಕ್ತ ಉತ್ತರ ನೀಡಲಾಗುವುದು ಮತ್ತು ಪ್ರತಿಕ್ರಿಯೆ ನಮ್ಮ ಷರತ್ತುಗಳ ಮೇಲೆ ಇರುತ್ತದೆ ಎಂದು ಅವರು ಪ್ರತಿಪಾದಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಇತ್ತೀಚಿನ ದಾಳಿಗಳ ನಂತರ ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, "ನಾವು ಪಾಕಿಸ್ತಾನದ ವಿರುದ್ಧದ ನಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ; ಭವಿಷ್ಯವು ಅವರ ನಡವಳಿಕೆಯನ್ನು ಅವಲಂಬಿಸಿದೆ" ಎಂದರು.

ಪಾಕಿಸ್ತಾನ ತಪ್ಪಿಸಿಕೊಳ್ಳ ದಾರಿ ಹುಡುಕುತ್ತಿದೆ

ಭಾರತದ ಆಕ್ರಮಣಕಾರಿ ಕ್ರಮದ ನಂತರ, ಪಾಕಿಸ್ತಾನ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿತು. ಪಾಕಿಸ್ತಾನವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಜಗತ್ತಿಗೆ ಮನವಿ ಮಾಡುತ್ತಿತ್ತು ಮತ್ತು ತೀವ್ರವಾಗಿ ಸೋತ ನಂತರ, ಪಾಕಿಸ್ತಾನಿ ಸೇನೆಯು ಮೇ.10 ರ ಮಧ್ಯಾಹ್ನ ನಮ್ಮ ಡಿಜಿಎಂಒ ಅವರನ್ನು ಸಂಪರ್ಕಿಸಿತು. ಆ ಹೊತ್ತಿಗೆ, ನಾವು ಭಯೋತ್ಪಾದನೆಯ ಮೂಲಸೌಕರ್ಯವನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಿದ್ದೇವೆ ಮತ್ತು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಆದ್ದರಿಂದ, ಪಾಕಿಸ್ತಾನವು ಇನ್ನು ಮುಂದೆ ಯಾವುದೇ ಭಯೋತ್ಪಾದಕ ಚಟುವಟಿಕೆ ಮತ್ತು ಮಿಲಿಟರಿ ಧೈರ್ಯವನ್ನು ತೋರಿಸುವುದಿಲ್ಲ ಎಂದು ಹೇಳಿದಾಗ, ಭಾರತವೂ ಅದನ್ನು ಪರಿಗಣಿಸಿತು ಎಂದು ಕದನ ವಿರಾಮದ ಬಗ್ಗೆ ತಿಳಿಸಿದರು.(ಏಜೆನ್ಸೀಸ್​)