ಭಾರತದ ಸೂಪರ್ಸ್ಟಾರ್ಗಳಲ್ಲಿ ಒಬ್ಬರಾದ ಆರ್ಆರ್ಆರ್(RRR) ಖ್ಯಾತಿಯ ರಾಮ್ಚರಣ್, ಸಿನಿಮಾ ನಟನೆಗೆ ಎಷ್ಟು ಫೇಮಸ್ಸೊ ಐಷಾರಾಮಿ ಜೀವನಕ್ಕೂ ಶೈಲಿಗೂ ಅಷ್ಟೆ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಅವರ ಚಿತ್ರ ಗೇಮ್ ಚೇಂಚರ್(Game Changer) ಸಿನಿಮಾದ ಜತೆ ಅವರ ಜೀವಶೈಲಿಯ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ಹೌದು, ಇದೇ ಜ.10ರಂದು ಗೇಮ್ ಚೇಂಚರ್ ಚಿತ್ರ ಬಿಡುಗಡೆಗೊಳ್ಳಲಿದ್ದು, ಅವರ ಅಭಿಮಾನಿಗಳು ಮತ್ತು ಚಿತ್ರ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಡಬಲ್ ಮೀನಿಂಗ್ ಮಾತು: ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸರ ವಶ! Honey Rose
ಇತ್ತೀಚಿಗೆ ಅಮೆರಿಕಾದ ಡೆಲ್ಲಾಸ್ನಲ್ಲಿ ನಡೆದ ಗೇಮ್ ಚೇಂಚರ್ ಸಿನಿಮಾ ಪ್ರೀ-ಇವೆಂಟ್ನಲ್ಲಿ ರಾಮ್ಚರಣ್ ಪಾಲ್ಗೊಂಡಿದ್ದರು. ನಟನನ್ನು ನೋಡಲು 10 ಸಾವಿರ ಅಧಿಕ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಅದಾಂಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ನಟ ರಾಮ್ ಚರಣ್ ಜೆಕೊಬ್ ಆ್ಯಂಡ್ ಕಂಪನಿಯ ಆಸ್ರೋನೋಮಿಯಾ ಟೂರ್ಬಿಲಲ್ಲನ್ ಎಂಬ ಹೆಸರಿನ ಐಷಾರಾಮಿ ವಾಚ್ ಧರಿಸಿದ್ದರು. ಹೌದು, ಇದರ ಬೆಲೆ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ. ಇದರ ಮಾರುಕಟ್ಟೆ ಮೌಲ್ಯ ಬರೊಬ್ಬರಿ 3.58 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ವಿಶ್ವ ಶ್ರೇಷ್ಠ ಬೌಲರ್ ಆದರೆ ಕೊಹ್ಲಿ… ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್ ಕೊನ್ಸ್ಟಾಸ್! Sam Konstas
ಇನ್ನು ಈ ಕೈಗಡಿಯಾರ ವಿಶೇಷ ಡಿಸೈನ್ ಹೊಂದಿದೆ. ಮುಂಬರುವ ಹೊಸ ಫಿಚರ್ಗಳಿಗೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ. ಅಲ್ಲದೆ, ಕೈ ಗಡಿಯಾರಗಳಲ್ಲಿ ಈ ಕಂಪನಿಯ ವಾಚ್ಗಳಲ್ಲಿ ಮಾಸ್ಟರ್ಪಿಸ್ ಎಂದೇ ವಾಚ್ ಹೆಸರುವಾಸಿಯಾಗಿದೆ.
ನಟ ರಾಮ್ಚರಣ್ ತಮ್ಮ ಜೀವನಶೈಲಿಗೆ ವಿಶೇಷ ಒತ್ತು ನೀಡುವ ಮೂಲಕ ಚಿತ್ರರಸಿಕರನ್ನು ಮತ್ತು ಅಭಿಮಾನಿಗಳನ್ನು ಆಕರ್ಷಿಸುತ್ತಾರೆ ಎಂಬುವುದು ಎರಡು ಮಾತಿಲ್ಲ ಎಂದು ಹೇಳಬಹುದು. (ಏಜೆನ್ಸೀಸ್)