ನ್ಯೂಸ್

ನಜೀರ್​-ಕಬೀರ್​ ಆಗಿ ಜೂ. ಎನ್​ಟಿಆರ್ ಮತ್ತು ಹೃತಿಕ್​; 2024ರ ಈ ದಿನದಂದು ಚಿತ್ರ ರಿಲೀಸ್!

ಮೋಹನ್​ ಶೆಟ್ಟಿ

ಮುಂಬೈ: ಬಾಲಿವುಡ್​ ಚಿತ್ರರಂಗದ ಸ್ಟಾರ್​ ನಟ ಹೃತಿಕ್ ರೋಷನ್ ಮತ್ತು ಟಾಲಿವುಡ್​ನ ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ 'ವಾರ್​ 2' ಚಿತ್ರದ ಬಗ್ಗೆ ಇದೀಗ ಅಧಿಕೃತ ಮಾಹಿತಿಯೊಂದು ಲಭಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಿತ್ರ, ಅಭಿಮಾನಿಗಳ ಮನದಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.

ಚಿತ್ರದ ಬಗ್ಗೆ ಘೋಷಿಸಿದ ಮೊದಲ ದಿನದಿಂದಲೂ ಟ್ರೆಂಡಿಂಗ್‌ನಲ್ಲಿರುವ 'ವಾರ್​ 2', ಇಬ್ಬರು ಸ್ಟಾರ್​ ನಟರ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಸದ್ಯ ಚಿತ್ರ ಯಾವ ದಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂಬ ಮಾಹಿತಿ ಈಗ ಅಧಿಕೃತವಾಗಿ ಘೋಷಣೆಯಾಗಿದೆ.

ಆಯನ್​ ಮುಖರ್ಜಿ ನಿರ್ದೇಶನದ ಆಕ್ಷನ್-ಥ್ರಿಲ್ಲರ್ 'ವಾರ್​ 2' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂ. ಎನ್​ಟಿಆರ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರ ತಯಾರಕರು ಸಿನಿಮಾವನ್ನು ಜನವರಿ 24, 2025 ರಂದು ಗಣರಾಜ್ಯೋತ್ಸವದ ವಾರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದಿತ್ಯ ಚೋಪ್ರಾ ನಿರ್ಮಾಣದ ಈ ಚಿತ್ರದ ಚಿತ್ರೀಕರಣವನ್ನು ಶೀಘ್ರವೇ ಮುಗಿಸಲು ನಿರ್ಧರಿಸಲಾಗಿದೆ,(ಏಜೆನ್ಸೀಸ್).