ನ್ಯೂಸ್

ರಾಜ್ಯಸಭಾ ಚುನಾವಣೆ: ಪಕ್ಷದಿಂದ ಯಾವ ಆದೇಶ ಬರುತ್ತದೋ ಅದನ್ನು ಪಾಲಿಸುತ್ತೇನೆ- ಡಾ. ವಿಜಯ ಸಂಕೇಶ್ವರ

ಹುಬ್ಬಳ್ಳಿ: ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದಿಂದ ನನಗೆ ಯಾವ ಆದೇಶ ಬರುತ್ತದೋ ಅದನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆಂದು ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಚುನಾವಣೆ ಕುರಿತಾದ ಮಾಧ್ಯಮ ಪ್ರಶ್ನೆಗೆ ಉತ್ತರಿಸಿ, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಸದ್ಯ ನಾನು ರಾಜಕಾರಣಿಯೂ ಅಲ್ಲ. ಇದು ರಾಜಕೀಯ ವೇದಿಕೆಯೂ ಅಲ್ಲ ಎಂದು ಹೇಳಿದರು.

ಕರೊನಾ ನಿಯಂತ್ರಣದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ಬಿಎಸ್​ವೈ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಮೋದಿ ಅವರಿಂದ ಶಹಬ್ಬಾಸ್​ಗಿರಿ ಪಡೆಯೋದು ಸುಲಭದ ಕೆಲಸವಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಬಿಟ್ಟು ಬೇರೆಡೆ ಕರೊನಾ ತಾಂಡವ ಆಡ್ತಿದೆ ಎಂದರು.