More

    ಕರೊನಾ ವೈರಸ್​ ಬಿಕ್ಕಟ್ಟನ್ನು ಪ್ರಧಾನಿ ಮೋದಿ ಉತ್ತಮವಾಗಿ ನಿಭಾಯಿಸಿದ್ದಾರೆ: ಡಾ. ವಿಜಯ ಸಂಕೇಶ್ವರ

    ಹುಬ್ಬಳ್ಳಿ: ಮಹಾಮಾರಿ ಕರೊನಾ ವೈರಸ್ ಇಡೀ ಜಗತ್ತನೇ ಬಾಧಿಸಿದ್ದು, ಮುಂದುವರಿದ ರಾಷ್ಟ್ರಗಳೇ ವೈರಸ್​ ತಡೆಗಟ್ಟಲು ಪರದಾಡುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು​ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ತಿಳಿಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರೊನಾ ಮಹಾಮಾರಿ ಜಗತ್ತಿನಾದ್ಯಂತ ಎಲ್ಲರನ್ನೂ ಮಂಡಿಯೂರುವಂತೆ ಮಾಡಿದೆ. ಮುಂದುವರಿದ ರಾಷ್ಟ್ರಗಳಿಗೆ ಸಹ ಯಾವ ರೀತಿ ಎದುರಿಸಬೇಕೆಂದು ತಿಳಿಯುತ್ತಿಲ್ಲ. ಭಾರತದಲ್ಲಿ ಪ್ರಧಾನಿ ಮೋದಿ ಅವರು ಕಡಿಮೆ ಸಮಯದಲ್ಲಿ ಒಳ್ಳೆಯ ರೀತಿಯಲ್ಲಿ ನಿಯಂತ್ರಣ ಮಾಡುತ್ತಿರುವುದನ್ನು ಇಡೀ ಜಗತ್ತು ಗಮನಿಸುತ್ತಿದೆ. ಅವರ ನೀತಿಗಳನ್ನು ಇತರ ದೇಶಗಳು ಸಹ ಪಾಲನೆ ಮಾಡುತ್ತಿವೆ ಎಂದು ಹೇಳಿದರು.

    ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆಗಳ ಜನ ಇದ್ದಾರೆ. ಹೀಗಾಗಿ ದೇಶದಲ್ಲಿ ಆಡಳಿತ ನಡೆಸೋದು ಒಂದು ಸವಾಲು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಗತ್ತು ಮೆಚ್ಚುವ ರೀತಿಯಲ್ಲಿ ಕರೊನಾವನ್ನು ಮೋದಿ ಎದುರಿಸಿದ್ದಾರೆ. ಮೋದಿಯವರಿಗೆ ಎಲ್ಲ ರಾಜ್ಯಗಳ ಕರೊನಾ ವಾರಿಯರ್ಸ್​ ಒಳ್ಳೆಯ ಬೆಂಬಲ ನೀಡಿದ್ದಾರೆ. ಅವರಿಗೆ ಸಲಾಂ ಹೇಳುತ್ತೇನೆ ಎಂದರು.

    ದೇಶಾದ್ಯಂತ ಮಾಧ್ಯಮ ಸಿಬ್ಬಂದಿಯು ತುಂಬಾ ಕಷ್ಟಪಟ್ಟಿದ್ದಾರೆ. ಹೆಚ್ಚು ಒತ್ತಡದೊಂದಿಗೆ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸೌಲಭ್ಯ ಇಲ್ಲದಿದ್ದರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಕರೊನಾ ವಾರಿಯರ್ಸ್​ಗಿಂತಲೂ ನಮ್ಮ ಮಾಧ್ಯಮ ವಾರಿಯರ್ಸ್​ ಕಡಿಮೆಯೇನಿಲ್ಲ. ಕರೊನಾದಿಂದ ನಮ್ಮ ಸಂಸ್ಥೆಯಿಂದ ಯಾರಾದ್ರೂ ಸಾವಿಗೀಡಾದ್ರೆ 50 ಲಕ್ಷ ರೂ. ಪರಿಹಾರವನ್ನು ಕೊಡುತ್ತೇವೆ ಎಂದರು.

    ಇನ್ನು ಮೇಲೆ ಯಾವುದೇ ಕಾರಣಕ್ಕೂ ವಿದೇಶಿ ವಸ್ತುಗಳನ್ನು ಕೊಳ್ಳಬೇಡಿ ಎಂದು ನಾನು ಜನರಲ್ಲಿ ನಿವೇದನೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ದೀಪಾವಳಿಯಲ್ಲಿ ಪಟಾಕಿಗಳನ್ನು ಸಂಪೂರ್ಣ ಬ್ಯಾನ್​ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಪಟಾಕಿಗಳಿಂದ ವಾಯು ಮಾಲಿನ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

    ಉದ್ಯಮಿ, ಮಾಜಿ ಸಂಸದ ಡಾ.ವಿಜಯ ಸಂಕೇಶ್ವರ ಸುದ್ದಿಗೋಷ್ಠಿ

    ಉದ್ಯಮಿ, ಮಾಜಿ ಸಂಸದ ಡಾ.ವಿಜಯ ಸಂಕೇಶ್ವರ ಸುದ್ದಿಗೋಷ್ಠಿ

    Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 5, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts