ನ್ಯೂಸ್

ಹಸುಗಳ ಕಣ್ಣಿಗೂ ಬಂತು ಗ್ಲಾಸ್​​; ವಿಆರ್ ಗ್ಲಾಸ್ ಹಾಕಿದ್ರೆ ಪಾತ್ರೆ ತುಂಬುವವರೆಗೂ ಹಾಲು ಕರೆಯಬಹುದು...

ರಷ್ಯಾ: ಸಂಗೀತವನ್ನು ಕೇಳುವುದರಿಂದ ಏನೇ ಬೇಸರ, ನೋವು ಇದ್ದರು ನಿವಾರಿಸುವ ಶಕ್ತಿ ಇದೆ ಎಂದು ಜನರು ಇಲ್ಲಿಯವರೆಗೆ ತಿಳಿದಿದ್ದರು, ಆದರೆ ರಷ್ಯಾದ ಹಾಲು ಉತ್ಪಾದಕರು ಹೊಸ ಪ್ರಯೋಗವನ್ನು ಮಾಡಿದೆ.

ರಷ್ಯಾದ ಕೃಷಿ ಇಲಾಖೆಯ ಪ್ರಕಾರ, ಹಸುವಿಗೆ ವಿಆರ್ ಕನ್ನಡಕವನ್ನು ಹಾಕುವುದರಿಂದ ಹಾಲು ನೀಡುವ ಸಾಮರ್ಥ್ಯವು ಶೇಕಡಾ 40ರಷ್ಟು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ರಷ್ಯಾದ ಕೃಷಿ ಮತ್ತು ಆಹಾರ ಸಚಿವಾಲಯವು ಈ ಉಪಕ್ರಮವನ್ನು ಪ್ರಾರಂಭಿಸಿದೆ ಮತ್ತು ಅದರ ವೀಡಿಯೊವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಮೈಂಡ್‌ಸೆಟ್ ಎಚ್2 ಎಂಬ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಹಸುಗಳಿಗೆ 24 ಗಂಟೆಗಳ ಕಾಲ ವಿಆರ್ ಗ್ಲಾಸ್‌ಗಳನ್ನು ಧರಿಸಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ಹಸಿರು ಹುಲ್ಲು ಮತ್ತು ತೆರೆದ ಮೈದಾನಗಳ ವೀಡಿಯೊವನ್ನು ಪ್ಲೇ ಮಾಡಲಾಗಿದೆ. ಇದರಿಂದಾಗಿ ಹಸು ತಾನು ಬಯಲಿನಲ್ಲಿ ವಾಸಿಸುತ್ತಿದೆ ಎಂಬ ಭ್ರಮೆಗೆ ಬರುತ್ತದೆ. ಇದು ಹಸುಗಳ ಮನಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಿಂದ ಹಸುವಿನ ಹಾಲಿನ ಉತ್ಪಾದನೆಯು ಹೆಚ್ಚಾಗುತ್ತದೆ. ಅಲ್ಲದೆ, ಇದು ಹಸುಗಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ರಷ್ಯಾದಲ್ಲಿ ಹಸುಗಳಿಗೆ ವಿಆರ್ ಕನ್ನಡಕವನ್ನು ಧರಿಸುವಂತೆ ಮಾಡಲಾಗುತ್ತಿದೆ, ಇದರಿಂದ ಅವು ಹುಲ್ಲು ಮತ್ತು ತೆರೆದ ಮೈದಾನದಲ್ಲಿವೆ ಮತ್ತು ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ ಎಂದು ಭಾವಿಸಬಹುದು. ಈ ಸಂಪೂರ್ಣ ಪ್ರಕ್ರಿಯೆಯು ಹಸುಗಳನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಅವುಗಳ ಹಾಲು ಇಳುವರಿ ಸಾಮರ್ಥ್ಯವೂ ಹೆಚ್ಚಾಗುತ್ತದೆ. ವಿ ಆರ್​​ ಕನ್ನಡಕವನ್ನು ಸಾಮಾನ್ಯವಾಗಿ ವಿಡಿಯೋ ಗೇಮ್​​​​​ ಸಮಯದಲ್ಲಿ ಅಥವಾ ಮನರಂಜನೆಗಾಗಿ ಬಳಸಲಾಗುತ್ತದೆ. ಆದರೆ ರಷ್ಯಾದ ಕೃಷಿ ಇಲಾಖೆಯು ಅದರ ವಿಶಿಷ್ಟ ಬಳಕೆಯನ್ನು ತೋರಿಸಿದೆ.