More

    ‘ಸ್ವಚ್ಛತೀರ್ಥ ಅಭಿಯಾನ’: ದೇಗುಲದ ಆವರಣ ಸ್ವಚ್ಛಗೊಳಿಸಿದ ನಟ ಜಗ್ಗೇಶ್

    ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೊಳ್ಳುವ ಹಿನ್ನೆಲೆಯಲ್ಲಿ ನಗರದ ಪುರಾತನ ದೇವಾಲಯಗಳಲ್ಲಿ ಸ್ವಚ್ಛತೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛತೆ ಕಾರ್ಯ ಮಾಡುವಂತೆ ಕರೆ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ನಾಯಕರು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಟ, ಸಂಸದ ಜಗ್ಗೇಶ್​ ಅವರೂ ತಮ್ಮ ಗ್ರಾಮದ ಕಾಲಭೈರವೇಶ್ವರ ಆಲಯ ಶುಚಿಗೊಳಿಸಿದ್ದಾರೆ.

    ಈ ಕುರಿತು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ನಟ, ಹೆಮ್ಮೆಯ ನಮ್ಮ ಪ್ರಧಾನಿಗಳು ಶ್ರೀ ನರೇಂದ್ರ ಮೋದಿಯವರ ಪ್ರೀತಿಯ ಬೇಡಿಕೆಯಂತೆ ಇಂದು ನನ್ನ ಗ್ರಾಮದ ಕಾಲಭೈರವೇಶ್ವರ ಆಲಯ ಶುಚಿಗೊಳಿಸುವ ಕಾರ್ಯ ಆಂತರ್ಯ ಭಕ್ತಿಯಿಂದ ಮಾಡಿದೆ. 560 ವರ್ಷಗಳ ಹೋರಾಟದ ಫಲಶ್ರುತಿಯಿಂದ ಶ್ರೀರಾಮ ದೇವಸ್ಥಾನ ಸ್ಥಾಪನೆ ಆಗುತ್ತಿದೆ. ಇನ್ನಾದರೂ ದೇಶದ ಪ್ರತಿಪ್ರಜೆಗಳ ಹೃದಯದಲ್ಲಿ ಶ್ರೀರಾಮ ಸ್ಥಾಪಿತವಾಗಲಿ, ಜೈ ಶ್ರೀರಾಮ ಎಂದು ಅವರು ಬರೆದುಕೊಂಡಿದ್ದಾರೆ.

    ಅಯೋಧ್ಯೆಯಲ್ಲಿ ಐತಿಹಾಸಿಕ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 12ರಿಂದ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಕೈಗೊಂಡಿದ್ದಾರೆ. ಈ ವೇಳೆ, ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಾಲಯದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಉಪವಾಸ ವ್ರತಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ, ಶ್ರೀ ಕಲಾರಾಮ್ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯವನ್ನು ಖುದ್ದು ಕೈಗೊಂಡ ಪ್ರಧಾನಿ, ದೇವಾಲಯವನ್ನು ಸ್ವಚ್ಛಗೊಳಿಸುವಂತೆ ಜನರಿಗೆ ಮನವಿ ಮಾಡಿಕೊಂಡರು. ಈ ಮನವಿ ಮೇರೆಗೆ ಇದಾಗಲೇ ಸಹಸ್ರಾರು ಮಂದಿ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ದೇಗುಲಗಳ ಸ್ವಚ್ಛತೆಯನ್ನು ನಡೆಸುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಮಾತ್ರವಲ್ಲದೇ ಸಹಸ್ರ ಸಂಖ್ಯೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರ ಈ ಮನವಿಗೆ ಸ್ಪಂದಿಸುತ್ತಿದ್ದಾರೆ.

    ಒಂದು ಮೊಟ್ಟೆ ಬೆಲೆ 33 ರೂ., ಕೆಜಿ ಈರುಳ್ಳಿಗೆ 250 ರೂ.; ಗ್ರಾಹಕರ ಜೇಬು ಸುಡುತ್ತಿದೆ ಬೆಲೆ ಏರಿಕೆ

    ನಾನು ಪ್ರಧಾನಿ ಮೋದಿ ಟೀಕಾಕಾರ, ಹೀಗಾಗಿ 3 ರಾಜಕೀಯ ಪಕ್ಷಗಳು ನನಗೆ ಟಿಕೆಟ್ ಆಫರ್ ಮಾಡಿವೆ: ನಟ ಪ್ರಕಾಶ್ ರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts