ನ್ಯೂಸ್

ದೆಹಲಿಯಲ್ಲಿ ಬಿರುಸಿನ ಮತದಾನ; ರಾಷ್ಟ್ರ ರಾಜಧಾನಿ ಅಧಿಕಾರ ಫೆ.08ಕ್ಕೆ ನಿರ್ಧಾರ | Delhi Elections 2025

Delhi Assembly Election 2025: ಇಂದು ಬೆಳಗ್ಗೆ 7 ಗಂಟೆಯಿಂದಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ 2025ರ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಧಾನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮುಂದಾಳತ್ವದ ಆಮ್​ ಆದ್ಮಿ ಪಕ್ಷದ ನಡುವೆ ಗೆಲುವಿಗಾಗಿ ಭಾರೀ ಹಣಾಹಣಿ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.

ದೆಹಲಿ ಮತದಾರರಿಂದ ಬಿರುಸಿನ ಮತದಾನ ನಡೆಯುತ್ತಿದ್ದು, 1.56 ಕೋಟಿಗೂ ಹೆಚ್ಚು ಮತದಾರರು ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಇಂದೇ ಕೆತ್ತಲಿದ್ದಾರೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 2,696 ಮತಗಟ್ಟೆಗಳಲ್ಲಿ ಒಟ್ಟು 13,766 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಲು ಎಎಪಿ ಎದುರುನೋಡುತ್ತಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪಣತೊಟ್ಟಿದೆ. ಈಗಾಗಲೇ ಘೋಷಣೆ ಮಾಡಿರುವ ಪಕ್ಷಗಳ ಪ್ರಣಾಳಿಕೆಗಳು ಮತದಾರರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ? ಯಾರಿಗೆ ಅಧಿಕಾರ ಸಿಗಲಿದೆ ಎಂಬುದು ಶೀಘ್ರವೇ ನಿರ್ಧಾರ ಆಗಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೇ ಫೆ.08ಕ್ಕೆ ಅಧಿಕೃತವಾಗಿ ಹೊರಬೀಳಲಿದೆ,(ಏಜೆನ್ಸೀಸ್).