ರೇಕ್‌ಜಾವಿಕ್: ನಾವು ಭಾರತೀಯರು ಜ್ವಾಲಾಮುಖಿಯ ಬಗ್ಗೆ ಕೇಳಿದ್ದೇವೆ. ಅದನ್ನು ನೋಡುವುದು ನಮಗೆ ದೂರದ ಮಾತು. ಆದರೆ ಇದೀಗ ಆ ಅವಕಾಶ ನಮಗೆಲ್ಲರಿಗೂ ಸಿಗುತ್ತಿದೆ. ಡ್ರೋನ್ ಮ್ಯಾನ್ ಒಬ್ಬರ ಕೃಪೆಯಿಂದಾಗಿ ಜ್ವಾಲಾಮುಖಿಯನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ.
ಹೌದು. ಕಳೆದ ಶುಕ್ರವಾರ ಯುರೋಪ್ನ ಐಸ್ಲ್ಯಾಂಡ್ನ ಫಾಗ್ರಾಡಾಲ್ಸ್ಫಾಲ್ನಲ್ಲಿ ಜ್ವಾಲಾಮುಖಿ ಎದ್ದಿದೆ. ಜ್ವಾಲಾಮುಖಿ ಸ್ಪಾಟ್ ಎನಿಸಿಕೊಂಡಿರುವ ಆ ಸ್ಥಳಕ್ಕೆ ಅದೇನು ಹೊಸತಲ್ಲ. ಆ ಜ್ವಾಲಾಮುಖಿಯನ್ನು ಚಿತ್ರೀಕರಿಸುವ ಧೈರ್ಯವನ್ನು ಎ ಗೈ ವಿತ್ ಡ್ರೋನ್ ಎಂಬ ಖ್ಯಾತಿ ಪಡೆದಿರುವ ಜಾರ್ನ್ ಸ್ಟೈನ್ಬೆಕ್ ಮಾಡಿದ್ದಾರೆ. ತಮ್ಮ ಡ್ರೋನ್ ಸಹಾಯದಿಂದ ಚಿತ್ರೀಕರಿಸಿದ್ದಾರೆ. ಯೆಸ್ ಐ ಡಿಡ್ ಇಟ್ ಎನ್ನುವ ಕ್ಯಾಪ್ಷನ್ ಕೊಟ್ಟು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜ್ವಾಲಾಮುಖಿ ಬಗ್ಗೆ ಕೇಳಿದ್ದ, ಫೋಟೋ ಮಾತ್ರ ನೋಡಿದ್ದ ಜನರು ಈ ವಿಡಿಯೋ ನೋಡಿ ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಇಷ್ಟು ಅದ್ಭುತ ವಿಡಿಯೋವನ್ನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಹೇಳಲಾರಂಭಿಸಿದ್ದಾರೆ.
ಅಂದ ಹಾಗೆ ಫಾಗ್ರಾಡಾಲ್ಸ್ಫಾಲ್ನಲ್ಲಿ ಜ್ವಾಲಾಮುಖಿ ಏಳುವ ಬಗ್ಗೆ ಕೆಲ ವಾರಗಳಿಂದ ನಿರೀಕ್ಷೆಯಿತ್ತು. ಈ ಜ್ವಾಲಾಮುಖಿಯಿಂದ ಯಾರಿಗೂ ಹೆಚ್ಚಿನ ತೊಂದರೆಯಾಗಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)