ನ್ಯೂಸ್

ಪೊಲೀಸರ ಯಶಸ್ವಿ ಕಾರ್ಯಾಚರಣೆ; ನಕಲಿ ಹಾರ್ಪಿಕ್, ಆಲ್​ಔಟ್ ಮಾರಾಟ ಮಾಡುತ್ತಿದ್ದ ವಂಚಕರು ಅಂದರ್

ಬೆಂಗಳೂರು: ಜನರು ಶಾಪಿಂಗ್ ವೇಳೆ ಅತಿಯಾದ ಜಾಗರೂಕತೆ ವಹಿಸಬೇಕು. ಯಾವುದೇ ಒಂದು ವಸ್ತುವನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ಕೊಂಡುಕೊಳ್ಳಬೇಕು. ಇಲ್ಲದೇ ಹೋದಲ್ಲಿ ನಕಲಿ ವಸ್ತುಗಳನ್ನು ಖರೀದಿಸಿ ಮೋಸ ಹೋಗಬಹುದಾದಂತಹ ಸಾಧ್ಯತೆ ಹೆಚ್ಚಿರುತ್ತದೆ. ಸದ್ಯ ಯಾವುದೇ ಮಾರುಕಟ್ಟೆಗೆ ಹೋದರೂ ನಕಲಿ ವಸ್ತುಗಳ ಸಂಖ್ಯೆ ದೊಡ್ಡದಿದೆ. ಯಾವುದು ಅಸಲಿ, ಯಾವುದು ನಕಲಿ ಎಂದು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದೆ.

ಇದೀಗ ನಕಲಿ ವಸ್ತುಗಳನ್ನು ಅಸಲಿ ಎಂದುಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಮೋಸದ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನಕಲಿ ಗುಡ್​ನೈಟ್ ಆಲ್​ಔಟ್ ಮತ್ತು ಹಾರ್ಪಿಕ್​ಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಪೊಲೀಸರು ನರೇಶ್‌ ಕುಮಾರ್, ಮಹೇಂದರ್, ಮನೋಜ್, ನಲಪತ್, ಎಂಬುವವರು ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ವಿವಿಪುರಂ ಪೊಲೀಸರು, 40 ಲಕ್ಷ ರೂ. ಮೌಲ್ಯದ ಸಮಾಗ್ರಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ನಕಲಿ ದಂಧೆಯ ಬಗ್ಗೆ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.