ಮುಂಬೈ : ಮುಂಬೈ-ಪುಣೆ ಮಾರ್ಗದ ಡೆಕ್ಕನ್ ಎಕ್ಸ್ಪ್ರೆಸ್ ವಿಶೇಷ ರೈಲಿನಲ್ಲಿ ಅಳವಡಿಸಲಾಗಿರುವ ಆಧುನಿಕ ವಿಸ್ಟಾಡೋಮ್ ಕೋಚ್ನ ಮೊದಲನೇ ಟ್ರಿಪ್ಗೆ ಇಂದು ಸೀಟುಗಳು ಪೂರ್ಣ ಭರ್ತಿ ಆಗಿವೆ. ಪ್ರಯಾಣಿಕರು ಪಾರದರ್ಶಕವಾದ ದೊಡ್ಡ ಕಿಟಕಿಗಳಿಂದ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡುವ ಅನುಭವ ಹೊಂದುತ್ತಿದ್ದಾರೆ.
ಪಶ್ಚಿಮ ಘಟ್ಟಗಳ ಸುಂದರ ನದಿಗಳು, ಕಣಿವೆ ಮತ್ತು ಜಲಪಾತಗಳನ್ನು ನೋಡುತ್ತಾ ಆರಾಮದಾಯಕವಾದ ಅಂತರರಾಷ್ಟ್ರೀಯ ಮಟ್ಟದ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಇಂದು ಚಾಲನೆ ನೀಡಲಾದ ಈ ಕೋಚ್ನ ಪ್ರಯಾಣದ ಸಮಯದಲ್ಲಿ ಪಶ್ಚಿಮ ಘಟ್ಟಗಳ ಪಾನೊರಾಮಿಕ್ ವ್ಯೂ ಲಭಿಸುತ್ತದೆ ಎಂದಿದ್ದಾರೆ.