ನ್ಯೂಸ್

VIDEO/ ಕೊಹ್ಲಿ ವರ್ಕೌಟ್​ಗೆ ಅಭಿಮಾನಿಗಳು ಫುಲ್​ ಫಿದಾ!

ಮುಂಬೈ: ಕರೊನಾ ಲಾಕ್​ಡೌನ್​ ಸಮಯವನ್ನು ಕುಟುಂಬಸ್ಥರೊಂದಿಗೆ ಕಳೆಯುತ್ತಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ, ಫಿಟ್ನೆಸ್​ ಕಾಪಾಡಿಕೊಳ್ಳಲು ಮನೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ. ಆ ಬಗ್ಗೆ ಸ್ವತಃ ಅವರೇ ವಿಡಿಯೋ ಶೇರ್​ ಮಾಡಿದ್ದು, ಸಖತ್​ ವೈರಲ್​ ಆಗುತ್ತಿದೆ.

ಟ್ವಿಟರ್​ನಲ್ಲಿ ಮಂಗಳವಾರ 'My first shot at 180 landings. Top exercise' ಎಂದು ಬರೆದು ಅಪ್ಲೋಡ್​ ಮಾಡಿರುವ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. '180 ಲ್ಯಾಂಡಿಂಗ್​ಗಳಲ್ಲಿ ಮೊದಲ ಶಾಟ್​... ಉತ್ತಮ ವ್ಯಾಯಾಮ' ಎಂಬ ಟೆಕ್ಸ್ಟ್ ಮುಂದೆ ಸೂಪರ್​ ಇಮೋಜಿ ಹಾಕಿದ್ದಾರೆ.

ಕಾಲುಗಳನ್ನು 180 ಡಿಗ್ರಿಯಷ್ಟು ಮೇಲಕ್ಕೆತ್ತಿ ಹಿಮ್ಮುಖದಿಂದ ಮುಂದಕ್ಕೆ ತಿರುಗುವ ಕೊಹ್ಲಿ ಕಸರತ್ತನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 'ವಿರಾಟ್ ಭಾಯ್​ಗೆ ಸ್ಫೂರ್ತಿ ನೀಡಿ.. ನೀವು ದಂತಕಥೆ'. "ಓ ಮೈ ಕಿಂಗ್.. ನೀವು ಏನೇ ಮಾಡಿದರೂ ಅದೆಲ್ಲವೂ ಐಕಾನಿಕ್'... ಹೀಗೆ ಸಾವಿರಾರು ಕಮೆಂಟ್​ಗಳು ಬರುತ್ತಿವೆ.

ವಿಡಿಯೋ ನೋಡಿ