ನವದೆಹಲಿ: ಅಭಿಮಾನಿಗಳ ವಿಚಾರವಾಗಿಯೇ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಲಂಡನ್‌ನ ಮ್ಯೂಸಿಯಂವೊಂದರಲ್ಲಿರುವ ವಿರಾಟ್ ಮೇಣದ ಪ್ರತಿಮೆಗೆ ಯುವತಿಯೊಬ್ಬಳು ಲಿಪ್ ಕಿಸ್ ಕೊಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಇದೆ. ಮಹಿಳಾ ಅಭಿಮಾನಿ ವಿರಾಟ್ ಪ್ರತಿಮೆಗೆ ಲಿಪ್ ಕಿಸ್ ಕೊಟ್ಟಿರುವ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಹೆಸರಿಗೆ ಟ್ಯಾಗ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಪ್ರತಿಮೆಗೆ ಮಾದಕವಾಗಿ ಲಿಪ್ ಕಿಸ್ ಕೊಡುತ್ತಿರುವ ಯುವತಿಗೆ ಹುಚ್ಚು ಹಿಡಿದಿದೆ . ಈ ಮಹಿಳೆಯ ವರ್ತನೆ ಅನುಚಿತವಾಗಿದೆ ಎಂದು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.