ನ್ಯೂಸ್

Mahakumbh Mela | ಗುಂಪಿನಲ್ಲಿ ಪತಿ ಕಳೆದುಕೊಳ್ಳುವ ಭಯದಿಂದ ಮಹಿಳೆಯ ಅದ್ಭುತ ಟ್ರಿಕ್​​; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ಲಖನೌ: ಪ್ರಯಾಗ್​​​ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಜನವರಿ 13 ರಂದು ಪ್ರಾರಂಭವಾದ ಈ ಕಾರ್ಯಕ್ರಮವು ಫೆಬ್ರವರಿ 26ರಂದು ತ್ರಿವೇಣಿ ಸಂಗಮದಲ್ಲಿ ಮಹಾಶಿವರಾತ್ರಿಯ ಸ್ನಾನದೊಂದಿಗೆ ಮುಕ್ತಾಯಗೊಳ್ಳಲಿದೆ. ಮಹಾಕುಂಭಮೇಳಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿವೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಜಾತ್ರೆಯ ಗುಂಪಿನಲ್ಲಿ ಕಳೆದುಹೋಗದಂತೆ ಹಗ್ಗದಿಂದ ಕಟ್ಟಿರುವುದನ್ನು ಕಾಣಬಹುದು.

ವೈರಲ್ ವೀಡಿಯೊದಲ್ಲಿ ಕುಂಭಮೇಳದ ಗುಂಪಿನಲ್ಲಿ ಮಹಿಳೆಯೊಬ್ಬರು ತಲೆಯ ಮೇಲೆ ಭಾರ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಆಕೆಯ ಕೈಯಲ್ಲಿ ಒಂದು ಹಗ್ಗವಿದೆ ಅದು ಮಹಿಳೆಯ ಹಿಂದೆ ನಡೆಯುವ ವಯಸ್ಸಾದ ಪುರುಷನ ಸೊಂಟಕ್ಕೆ ಕಟ್ಟಲ್ಪಟ್ಟಿದೆ. ಪುರುಷನು ಮಹಿಳೆಯೊಂದಿಗೆ ಮುಂದೆ ಸಾಗುತ್ತಿರುವುದನ್ನು ಕಾಣಬಹುದು.

ಇದುವರೆಗೂ ಈ ವಿಡಿಯೋವನ್ನು ನಾಲ್ಕೂವರೆ ಕೋಟಿಗೆ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಇವರು ನಿಜವಾದ ದಂಪತಿ, ಜಾತ್ರೆಯ ಗುಂಪಿನಲ್ಲಿ ಪತಿಯನ್ನು ಕಳೆದುಕೊಳ್ಳುವ ಭಯದಲ್ಲಿ ಮಹಿಳೆ ಹಗ್ಗದಿಂದ ಕಟ್ಟಿದ್ದಾರೆ, ಹಳ್ಳಿಯ ಜನರು ತುಂಬಾ ಸರಳರು, ನಿಜವಾದ ಜೀವನ ಸಂಗಾತಿ ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ, ಐವತ್ತೈದು ವರ್ಷಗಳ ಪ್ರೀತಿ, ಇದು ಮುಗ್ಧ ಜುಗಾಡ್​ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)