ನ್ಯೂಸ್

ಒಂದೇ ಜಿಗಿತದಲ್ಲಿ ನದಿ ದಾಟಿದ ಹುಲಿ; ಕಣ್ಣು ಕುಕ್ಕುವ ದೃಶ್ಯಕ್ಕೆ ನೆಟ್ಟಿಗರು ಫಿದಾ | Viral Video

ಬೇಟೆಯಾಡುವ ಕಾಡುಪ್ರಾಣಿಗಳಲ್ಲಿ ಹುಲಿಗೆ ಸಾಟಿಯೇ ಇಲ್ಲ. ಶಕ್ತಿ, ವೇಗ ಮತ್ತು ಬುದ್ಧಿವಂತಿಕೆಯಲ್ಲಿ ಹುಲಿಗೆ ಹೊಂದಾಣಿಕೆಯೇ ಇಲ್ಲ. ಒಂದೇ ಜಿಗಿತದಲ್ಲಿ ಬಂಡೆಗಳ ಮೇಲೆ ಹಾರಿ ನದಿ ದಾಟುವ ಶಕ್ತಿ ಹುಲಿಗಿದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗುತ್ತಿದೆ. ಆದರೆ ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ದೃಢಪಟ್ಟಿಲ್ಲ.

ವೈರಲ್​ ವಿಡಿಯೋದಲ್ಲಿ ಹುಲಿ ನಡೆದುಕೊಂಡು ನದಿಯ ದಡವನ್ನು ತಲುಪುತ್ತದೆ. ಮಧ್ಯದಲ್ಲಿ ನದಿ ಇರುವುದನ್ನು ನೀವು ನೋಡಬಹುದು. ಆದರೆ ನಿರಾಯಾಸವಾಗಿ ಒಂದೇ ಜಿಗಿತಕ್ಕೆ ನದಿಯ ಇನ್ನೊಂದು ಬದಿಯನ್ನು ತಲುಪುವುದನ್ನು ನೀವು ಕಾಣಬಹುದು.

17 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 6.1 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. 64 ಸಾವಿರ ಮಂದಿ ಲೈಕ್​ ಮಾಡಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಹುಲಿಯ ಅದ್ಭುತ ಜಿಗಿತವನ್ನು ನೋಡಿ ಮಹಾರಾಣಾ ಪ್ರತಾಪನ ಕುದುರೆ ನೆನಪಾಯಿತು, ಅರಣ್ಯದ ಭಯಂಕರ ನರಭಕ್ಷಕಗಳಲ್ಲಿ ಹುಲಿಯು ಅಗ್ರಸ್ಥಾನದಲ್ಲಿದೆ ಎಂದು ಕಾಮೆಂಟ್​ ಮಾಡಿದ್ದಾರೆ.