ನ್ಯೂಸ್

ಕರ್ತವ್ಯದ ನಂತರ ಡ್ಯಾನ್ಸ್​ ಮಾಡಿ ರಿಲಾಕ್ಸ್​​; ಪೊಲೀಸರ Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

ಪೊಲೀಸ್ ಕೆಲಸ ಸುಲಭವಲ್ಲ. ಕಾರ್ಪೊರೇಟ್ ಸಂಸ್ಥೆಗಳಂತೆ ಇಲ್ಲಿ ಕೆಲಸದ ಸಮಯವಿಲ್ಲ. ಪೊಲೀಸರಿಗೆ ಯಾವುದೇ ಪ್ರಕರಣ ಅಥವಾ ಕರ್ತವ್ಯವನ್ನು ನಿಯೋಜಿಸಿದರೆ ಅವರು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅವರಿಗೆ ಬ್ರೇಕ್​ ಎಂಬುದೆ ಇರುವುದಿಲ್ಲ. ಆದರೆ ಪೊಲೀಸರ ಸಂಭ್ರಮದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಬಸ್ಸ್​​​ನಲ್ಲಿ ಪೊಲೀಸ್ ಪುರುಷ ಸಿಬ್ಬಂದಿ ಕುಳಿತಿರುವುದನ್ನು ನೋಡಬಹುದು. ಹಾಡು ಬಂದ ತಕ್ಷಣವೇ ಎಲ್ಲರೂ ಕುಳಿತಲ್ಲಿಯೇ ಡ್ಯಾನ್ಸ್​ ಮಾಡುತ್ತಿದ್ದಾರೆ. ಕೆಲಸದಲ್ಲಿ ಎಷ್ಟೇ ದಣಿದಿದ್ದರೂ ಅವರ ಸಂಭ್ರಮವು ಮೊಗದಲ್ಲಿ ಕಾಣುವುದನ್ನು ಕಾಣಬಹುದು.

ಪೊಲೀಸರ ಗುಂಪಿನ ಈ ಡ್ಯಾನ್ಸ್​ ವಿಡಿಯೋ ವೈರಲ್​ ಆಗುತ್ತಿದ್ದ ಇದುವರೆಗೂ 49 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಮೆಚ್ಚಿಕೊಂಡಿದ್ದಾರೆ. ನಿಮಗೂ ಬ್ರೇಕ್ ಬೇಕಿದೆ, ಹೃದಯ ಗೆದ್ದ ಮಂದಿ, ಹ್ಯಾಟ್ಸ್​ ಆಫ್​​​ ನಿಮಗೆ, ಕರ್ತವ್ಯದ ನಂತರ ವಿಶ್ರಾಂತಿಯ ಕ್ಷಣಗಳು ಎಂದು ಕಾಮೆಂಟ್​ ಮಾಡಿದ್ದಾರೆ.