ನ್ಯೂಸ್

ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಕಡಲೆಕಾಯಿ ಮಾರುವ ಹುಡುಗಿ; Viral Video ನೋಡಿದ್ರೆ ಹೊಗಳುವುದಂತೂ ಗ್ಯಾರಂಟಿ

ಇಸ್ಲಾಮಾಬಾದ್​: ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್​ ವೈರಲ್(Viral Video) ಆಗುತ್ತಿದೆ. ಈ ವಿಡಿಯೋವನ್ನು ಪಾಕಿಸ್ತಾನದ ವ್ಲಾಗರ್​ ಒಬ್ಬರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲಕಿಯೊಬ್ಬಳು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿರುವುದು ವಿಶೇಷವಾಗಿದೆ. ಶುಮೈಲಾ ಎಂಬ ಬಾಲಕಿ ಯಾವತ್ತೂ ಶಾಲೆಗೆ ಹೋಗಿಲ್ಲ, ಕಡಲೆಕಾಯಿ ಮಾರುತ್ತಾಳೆ. ಆದರೆ ಆಕೆಯ ನಿರರ್ಗಳ ಇಂಗ್ಲಿಷ್ ಎಲ್ಲರನ್ನು ಅಚ್ಚರಿಗೊಳಿಸಿದೆ.

ಇಂಗ್ಲಿಷ್​ ಮಾತ್ರವಲ್ಲ ಆ ಹುಡುಗಿ ಆರು ಭಾಷೆಗಳನ್ನು ಮಾತನಾಡಬಲ್ಲಳು ಎಂದು ಹೇಳುತ್ತಾಳೆ. ಶುಮೈಲಾ ತನ್ನ ತಂದೆ 14 ಭಾಷೆಗಳನ್ನು ಮಾತನಾಡಬಲ್ಲರು ಮತ್ತು ತನಗೂ ಕಲಿಸುತ್ತಾರೆ ಎಂದು ಹೇಳಿಕೊಂಡರು. ಅವಳು ಸ್ವತಃ ಉರ್ದು, ಇಂಗ್ಲಿಷ್, ಚಿತ್ರಾಲಿ, ಸಿರ್ಕಿ, ಪಂಜಾಬಿ ಮತ್ತು ಪಾಷ್ಟೋ ಮಾತನಾಡಬಲ್ಲಳು ಎಂದು ಹೇಳಿದಳು. ಮೊದಲ ವಿಡಿಯೋದಲ್ಲಿ 'ನನ್ನ ತಂದೆ 14 ಭಾಷೆಗಳನ್ನು ಮಾತನಾಡಬಲ್ಲೆ ಮತ್ತು ನಾನು ಆರು ಭಾಷೆಗಳನ್ನು ಮಾತನಾಡುತ್ತೇನೆ, ನಾನು ಶಾಲೆಗೆ ಹೋಗುವುದಿಲ್ಲ, ನನ್ನ ತಂದೆ ನನಗೆ ಮನೆಯಲ್ಲಿ ಕಲಿಸುತ್ತಾರೆ ಎಂದು ಹೇಳಿದ್ದಾಳೆ.

ಎರಡನೇ ವಿಡಿಯೋದಲ್ಲಿ ತನ್ನ ಕೆಲಸದ ಬಗ್ಗೆ ತಿಳಿಸಿದ್ದಾಳೆ. ನಾನು ಕಡಲೆಕಾಯಿ ಮತ್ತು ಸೂರ್ಯಕಾಂತಿ ಬೀಜಗಳನ್ನು ಮಾರಾಟ ಮಾಡುತ್ತೇನೆ. ನೀವು ಏನನ್ನಾದರೂ ಖರೀದಿಸಲು ಬಯಸುವಿರಾ? ಎಂದು ಕೇಳಿದ್ದಾಳೆ. ಜತಗೆ ತನ್ನ ಕುಟಂಬದ ಪರಿಚಯವನ್ನು ಮಾಡಿದ್ದಾಳೆ. ನನಗೆ ಐದು ಅಮ್ಮಂದಿರು ಹಾಗೂ 30 ಸಹೋದರ ಮತ್ತು ಸಹೋದರಿಯರು ಇದ್ದಾರೆ ಎಂದು ಹೇಳುತ್ತಾಳೆ.

ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವಳು ತುಂಬಾ ಸಿಹಿ ಮತ್ತು ಕಠಿಣ ಪರಿಶ್ರಮಿ. ಅಲ್ಲಾಹನು ಅವನಿಗೆ ದಯೆ ತೋರಲಿ, ಹುಡುಗಿ ಇಂಗ್ಲಿಷ್ ಚೆನ್ನಾಗಿ ಮಾತನಾಡುವುದನ್ನು ನೋಡಲು ತುಂಬಾ ಸಂತೋಷವಾಗಿದೆ, ನಮ್ಮ ಪಾಕಿಸ್ತಾನದಲ್ಲಿ ಸಾಕಷ್ಟು ಪ್ರತಿಭೆಗಳಿವೆ ಆದರೆ ಅದನ್ನು ಮರೆಮಾಡಲಾಗಿದೆ ಯಾರೂ ಸಹ ನೋಡುವುದಿಲ್ಲ, ಈ ಹುಡುಗಿ ದೇವರ ಉಡುಗೊರೆ, ಆಕೆಯ ಪ್ರತಿಭೆ ಗೋಚರಿಸುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)