ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವಾಗಿ ದೆಹಲಿ ಮೆಟ್ರೋ ಆಗಿಂದಾಗೆ ದೇಶದ ಜನರ ಗಮನವನ್ನು ಸೆಳೆಯುತ್ತಿರುತ್ತದೆ. ಕೆಲವೊಮ್ಮ ಅಸಭ್ಯ ವರ್ತನೆಯಿಂದ, ಹೊಡೆದಾಟದ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಹೊಸ ಘಟನೆ ಒಂದರಲ್ಲಿ ಮಹಿಳೆಯರಿಬ್ಬರು ಪೋಲ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಳೆಯ ಬಾಲಿವುಡ್ ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡುತ್ತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರಿಬ್ಬರು ಪರ್ವೀನ್ ಬಾಬಿ, ಶಶಿ ಕಪೂರ್ ನಟನೆಯ ಸುಹಾಗ್ ಚಿತ್ರದ ಮೈನ್ ತೋ ಬೇಗಾರ್ ಹೂ ಹಾಡಿಗೆ ಇಬ್ಬರು ಪೋಲ್ ಸುತ್ತ ಡ್ಯಾನ್ಸ್ ಮಾಡುತ್ತಿರುವುದ ಕಂಡು ಬಂದಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ಕಿಸ್ಸಿಂಗ್, ಹಸ್ತಮೈಥುನ , ಹೊಡೆದಾಟದಂತಹ ವಿಡಿಯೋಗಳು ವೈರಲ್ ಆಗುತ್ತಿದ್ದವು. ಇದೀಗ ಪೋಲ್ ಡ್ಯಾನ್ಸ್ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, DMRC ಅಧಿಕಾರಿಗಳು ಇಷ್ಟೆಲ್ಲಾ ಆದರೂ ಯಾವುದೇ ಕ್ರಮ ಜರುಗಿಸದಿರುವುದಕ್ಕೆ ಕಿಡಿಕಾರಿದ್ದಾರೆ.