ನ್ಯೂಸ್

ಭಾರತದ ಮೇಲಿನ ಸುಂಕ ನೀತಿಯನ್ನು ಸಮರ್ಥಿಸಿಕೊಂಡ ಟ್ರಂಪ್​! ವಿಡಿಯೋ ವೈರಲ್​ | Donald Trump

Donald Trump: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಾವು ಭಾರತದ ಮೇಲೆ ಹೇರಿರುವ ಸುಂಕ ನೀತಿಯನ್ನು ಸಮರ್ಥಿಸಿಕೊಳ್ಳಲು ವೇದಿಕೆಗೆ ಆಗಮಿಸಿದ್ದು, ಈ ಬಾರಿ ಇದನ್ನು ಅಂತಿಮ "ಯುದ್ಧ ವಸಾಹತುಗಾರ" ಎಂದು ಕರೆದಿದ್ದಾರೆ. ಹಾಗೇ ಇದು "ವಾಷಿಂಗ್ಟನ್​ನ ಉತ್ತಮ ಸಮಾಲೋಚನೆ" ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಟ್ರಂಪ್​, ಅಮೇರಿಕಾದ ಸ್ಪೇನ್​ ಪ್ರಧಾನ ಕಚೇರಿಯನ್ನು ಅಲಮಾಬಾದ ಹಂಟ್ಸ್​ವಿಲ್ಲೆಗೆ ಸ್ಥಳಾಂತರಿಸುವುದಾಗಿ ತಿಳಿಸಿದರು. ಹಾಗೆಯೇ ಸುಂಕಗಳ ಬಗ್ಗೆ ನಿಲುವನ್ನು ತಿಳಿಸುವಾಗ ಸುಂಕಗಳು ಆರ್ಥಿಕತೆಯನ್ನು ಹೆಚ್ಚಿಸುವುದಲ್ಲದೇ, ಏಳು ಯುದ್ಧಗಳನ್ನು ಇತ್ಯರ್ಥಗೊಳಿಸಲು ಸಾಹಾಯ ಮಾಡಿತು ಎಂದರು.

ಡೊನಾಲ್ಡ್​ ಟ್ರಂಪ್​ ಹೇಳಿಕೆ ಏನು?

ಅಮೇರಿಕಾ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶವು ಸಾಯುತ್ತಿತ್ತು. ಇದು ನಿಜ. ನಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ ಅದನ್ನು ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಹಸ ಮಾಡಿದ್ದೇನೆ. ನಂತರ ಬಿಡೆನ್​ ಆಡಳಿತದಲ್ಲಿ ಯುಎಸ್​ ಅವನತಿ ಹೊಂದಲು ಪ್ರಾರಂಭಿಸಿತು. ಇದಾದ ಬಳಿಕ ನಾನ್ನ ಆಡಳಿತಲ್ಲಿ ನಾನು ಭಾವಿಸಿದ ಮಟ್ಟಕ್ಕೆ ಅದನ್ನು ಕೊಂಡೊಯ್ದಿದ್ದೇನೆ. ನಾವು ತುಂಬಾ ಉತ್ಸಾಹಿಗಳು, ಸುಂಕಗಳು ಮತ್ತು ಇತರ ಮೂಲಕ ಬರುವ ಹಣವು ನಮಗೆ ತುಂಬಾ ದೊಡ್ದು. ಇದರ ಜೊತೆಗೆ ಉತ್ತಮ ಸಮಾಲೋಚನೆಯನ್ನು ಸಹ ನಾವು ಮಾಡಿದ್ದೇವೆ ಎಂದರು.

ವ್ಯಾಪಾರದ ಕಾರಣಗಳಿಂದಾಗಿ ನಾನು ಏಳು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ. ಇವೆಲ್ಲವೂ ನಾನು ಮಾಡಿಕೊಂಡ ವ್ಯಾಪಾರದ ಒಪ್ಪಂದಗಳು ಸುಂಕದ ಕಾರಣದಿಂದಾಗಿದ್ದವು. ಇದು ನಿಮಗೆ ಉತ್ತಮ ಸಾಮರ್ಥ್ಯವನ್ನು ನೀಡುತ್ತವೆ ಎಂದಿದ್ದಾರೆ.

ಶೇ.50 ರಷ್ಟು ಭಾರತದ ಆಮದುಗಳ ಮೇಲಿರುವ ಸುಂಕ ಸಮರ್ಥಿಸಿಕೊಂಡ ಟ್ರಂಪ್​

ಭಾರತೀಯ ಆಮದುಗಳ ಮೇಲೆ ಹೋರಿಸಲಾದ ಶೇ.50 ರಷ್ಟು ಸುಂಕವನ್ನು ಟ್ರಂಪ್​ ಸಮರ್ಥಿಸಿಕೊಂಡಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ವ್ಯವಹಾರ ಸಂಬಂಧಗಳು ಹಲವು ವರ್ಷಗಳಿಂದ "ಏಕಪಕ್ಷೀಯ"ವಾಗಿದ್ದವು. ಆದರೆ ನವದೆಹಲಿ ವಾಷಿಂಗ್ಟನ್‌ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ನಾವು ಭಾರತದೊಂದಿಗೆ ಹೊಂದಿಕೊಳ್ಳುತ್ತೇವೆ. ಆದರೆ, ಭಾರತ ಹಲವು ವರ್ಷಗಳಿಂದ ಅದು ಏಕಪಕ್ಷೀಯ ಸಂಬಂಧವಾಗಿತ್ತು. ಹಾಗೇ ಇದು ನಮ್ಮಿಂದ ಅಗಾಧ ಸುಂಕವನ್ನು ವಿಧಿಸುತ್ತಿತ್ತು. ಆದರಿಂದ ನಾವು ಭಾರತದೊಂದಿಗೆ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ ಅವರು ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಏಕೆಂದರೆ, ನಾವು ಅವರ ರೀತಿಯಲ್ಲಿ ಶುಲ್ಕ ವಿಧಿಸುತ್ತಿರಲಿಲ್ಲ. ಆದರಿಂದ ಅವರು ಎಲ್ಲಾ ಸರಕುಗಳನ್ನು ನಮ್ಮ ದೇಶಕ್ಕೆ ಸುರಿದರು ಆದರೆ ನಾವು ಅವರಿಗೆ ಏನನ್ನು ಕಳುಹಿಸುತ್ತಿರಲಿಲ್ಲ ಏಕೆಂದರೆ, ಅವರು ಪ್ರತಿಶತ 100 ರಷ್ಟು ಸುಂಕ ವಿಧಿಸುತ್ತಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)