ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಜಗಳದ ಹಲವು ವಿಡಿಯೋಗಳನ್ನು ನೋಡಿರುತ್ತೇವೆ. ಕೆಲವೊಮ್ಮೆ ಎಷ್ಟೋ ಜನರು ಈ ರೀತಿ ವಿಡಿಯೋ ವೈರಲ್ ಆದ್ರೆ ನಮ್ಮ ಮರ್ಯಾದೆ ಪ್ರಶ್ನೆ ಎಂದು ಸುಮ್ಮನಾಗುತ್ತಾರೆ. ಇದಕ್ಕೆ ವಿರುದ್ಧವಾಗಿ ರಾಷ್ಟ್ರರಾಜಧಾನಿಯಲ್ಲಿ ಕಾರು ನಿಲ್ಲಿಸುವ ವಿಚಾರವಾಗಿ ಯುವಕನೊಂದಿಗೆ ಒಬ್ಬ ತಾಯಿ ಮತ್ತು ಆಕೆಯ ಮಗಳು ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ(Viral Video). ಈ ವಿಡಿಯೋ ನೋಡಿದ ಅನೇಕರು ಆ ಮಹಿಳೆ ಹಾಗೂ ಆಕೆಯ ಮಗಳ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಮನುಷ್ಯರಂತೆ ಎರಡು ಕಾಲುಗಳ ಮೇಲೆ ನಿಂತ ಕರಡಿ; ಚೀನಾದ Viral Video ನೋಡಿ ಇದು ನಕಲಿ ಅಲ್ಲವೇ ಎಂದ ನೆಟ್ಟಿಗರು
ಸುಮಾರು ಮೂರೂವರೆ ನಿಮಿಷದ ಈ ವಿಡಿಯೋದಲ್ಲಿ ತಾಯಿ ಮತ್ತು ಆಕೆಯ ಮಗಳು ಆ ಹುಡುಗನಿಗೆ ಬೈಯತ್ತಿರುವ ಧ್ವನಿಯೂ ಹೆಚ್ಚಾಗಿ ಕೇಳುಬರುವುದನ್ನು ನೀವು ನೋಡಬಹುದು. ಆ ಹುಡುಗಿ ಬಾಯಿಗೆ ಬಂದಂತೆ ಕೆಟ್ಟ ಪದಗಳನ್ನು ಬಳಸುವುದನ್ನು ಕಾಣಬಹುದು. ಹುಡುಗಿಯು ತನ್ನ ಕಾರನ್ನು ಹುಡುಗನ ಕಾರಿನ ಮುಂದೆ ನಿಲ್ಲಿಸುತ್ತಾಳೆ. ಇದರಿಂದಾಗಿ ತನ್ನ ಕಾರು ಹಾದುಹೋಗಲು ಸಾಧ್ಯವಾಗುತ್ತಿಲ್ಲ ಕಾರನ್ನು ತೆಗೆಯುವಂತೆ ಹುಡುಗ ಕೇಳಿದಾಗ ಈ ವಿವಾದ ಆರಂಭವಾಗಿದೆ. ಮಗಳ ವರ್ತನೆಯನ್ನು ತಾಯಿಯು ಸಮರ್ಥಿಸುತ್ತಿರುವುದನ್ನು ನೀವು ನೋಡಬಹುದು.
ಕಾರನ್ನು ತಪ್ಪಾಗಿ ನಿಲ್ಲಿಸಿದ್ದಾಗಿ ತೆಗೆಯುವಂತೆ ಕೇಳಿದರೆ ಅವರು ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹುಡುಗ ಹೇಳಿದ್ದಾನೆ. ಇದರ ನಂತರ ಮತ್ತೊಬ್ಬ ವ್ಯಕ್ತಿ ಈ ಜಗಳವನ್ನು ನಿಲ್ಲಿಸಲು ಮುಂದಾಗುತ್ತಾರೆ. ಇಬ್ಬರನ್ನೂ ಕಾರಿನೊಳಗೆ ಕುಳಿತುಕೊಳ್ಳಲು ಕೇಳುತ್ತಾರೆ. ಇದರೊಂದಿಗೆ ಸುಮಾರು ಮೂರೂವರೆ ನಿಮಿಷಗಳ ಈ ವಿಡಿಯೋ ಮುಗಿಯುತ್ತದೆ.
ಈ ಫೈಟ್ನ ವಿಡಿಯೋವನ್ನು ಇದುವರೆಗೂ ಹಲವರು ವೀಕ್ಷಿಸಿ ಪ್ರತಿಕ್ರಿಯಿಸುತ್ತಿದ್ದಾರೆ. ಇದೆಂಥಾ ವರ್ತನೆ ಮಗಳಿಗೆ ಬುದ್ಧಿ ಕಲಿಸಿ, ದೆಹಲಿಯ ವಿದ್ಯಾವಂತ, ಸಮೃದ್ಧ, ಅಧಿಕಾರ ಮತ್ತು ಅರ್ಹ ಮಹಿಳಾ ಶಕ್ತಿ, ಮಗಳು ಐಪಿಎಸ್ ಎಂದು ಹೆದರಿಸುತ್ತಿದ್ದಾರೆ, ವಾಹ್ ಅನಾರೋಗ್ಯದ ಮನೆ ಮತ್ತು ಹಾಸ್ಯಾಸ್ಪದ ಪಾಲನೆ ಮಾತ್ರ ಮಕ್ಕಳು ತಮ್ಮ ಹೆತ್ತವರ ಮುಂದೆ ವಯಸ್ಕರನ್ನು ನಿಂದಿಸಲು ಅನುವು ಮಾಡಿಕೊಡುತ್ತದೆ, ಅಮ್ಮನ ಮುಂದೆ ಈ ರೀತಿ ಮಾತನಾಡುವುದನ್ನು ನಾನು ಊಹಿಸಲೂ ಸಾಧ್ಯವಿಲ್ಲ, ತನ್ನ ತಾಯಿಯ ಆ ಸ್ಥಳದಲ್ಲಿದ್ದರೆ ನನ್ನನ್ನು ಗದರಿಸಿ ಕಾರನ್ನು ತೆಗೆಯುವಂತೆ ಕೇಳುತ್ತಿದ್ದಳು ಎಂದು ಕಾಮೆಂಟ್ ಮಾಡಿದ್ದಾರೆ.