ನ್ಯೂಸ್

ಮೆಟ್ರೋ ಟ್ರ್ಯಾಕ್​ ಮೇಲೆ ಮೂತ್ರ ವಿಸರ್ಜಿಸುತ್ತಿರುವ ವ್ಯಕ್ತಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೀಗೆ | Viral Video

ಟೋಕಿಯೋ: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲ್​ ಆಗುವುದನ್ನು ನಾವು ನೋಡುತ್ತೇವೆ. ಈ ವೀಡಿಯೊಗಳಲ್ಲಿ ವಿವಿಧ ರೀತಿಯ ಜನರು ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡುವುದನ್ನು ನೋಡಬಹುದು. ಆದರೆ ಸದ್ಯ ಜಾಲತಾಣದಲ್ಲಿ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ವಿಚಿತ್ರ ಕೃತ್ಯದ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಮೆಟ್ರೋ ಹತ್ತಲು ಬಂದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮೆಟ್ರೋ ಟ್ರ್ಯಾಕ್​ ಮೇಲೆ ಸಾರ್ವಜನಿಕವಾಗಿಯೇ ಮೂತ್ರವಿಸರ್ಜನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮೆಟ್ರೋಗಾಗಿ ಕಾಯುತ್ತಿರುವವರು ಹಾಗೂ ಸುತ್ತಮುತ್ತಲೂ ಇರುವ ಜನರು ಆತನನ್ನು ನೋಡುತ್ತಾ ಸಾಗುತ್ತಾರೆ. ಅಷ್ಟರಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಬಂದು ಆ ವ್ಯಕ್ತಿಯನ್ನು ಹಿಡಿದು ಕರೆದುಕೊಂಡು ಹೋಗುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಜಪಾನ್​ ದೇಶದ್ದು ಎನ್ನಲಾಗಿದೆ.

ವಿಡಿಯೋವನ್ನು ಹಂಚಿಕೊಂಡಿರುವವರು ಶೀರ್ಷಿಕೆಯಲ್ಲಿ, ಭಾರತದಲ್ಲಿ ಕೊಳಕು ಇದೆ ಎಂದು ನಾನು ಎಲ್ಲ ಭಾರತೀಯರಿಗೆ ಹೇಳುತ್ತೇನೆ, ಆದರೆ ಭಾರತದಲ್ಲಿ ಮಾತ್ರ ಕೊಳಕ್ಕಿಲ್ಲ. ಇತರ ದೇಶಗಳು ಸ್ವರ್ಗವಲ್ಲ ಏಕೆಂದರೆ ಮಾಧ್ಯಮಗಳು ಪ್ರಪಂಚದಾದ್ಯಂತ ಏನಾಗುತ್ತದೆ ಎಂಬುದನ್ನು ನಿಮಗೆ ಅಪರೂಪವಾಗಿ ತೋರಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಇಲ್ಲಿಯವರೆಗೂ ಒಂದು ಮಿಲಿಯನ್​ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ. ನಮಗೆಲ್ಲ ಜಪಾನ್ ಅತ್ಯಂತ ಆಧುನಿಕ ನಾಗರಿಕತೆ ಎಂದು ಹೇಳಲಾಗುತ್ತದೆ, ಜಪಾನ್ ಅತ್ಯಂತ ಸುರಕ್ಷಿತ ಮತ್ತು ಸುಸಂಸ್ಕೃತವಾಗಿದ್ದರೂ ಪರಿಪೂರ್ಣವಲ್ಲ, ಆ ವ್ಯಕ್ತಿ ಕುಡಿದು ಬಂದಿದ್ದಾರಾ?, ಯುರೋಪ್‌ನಲ್ಲಿ ವಿಶೇಷವಾಗಿ ಫ್ರಾನ್ಸ್‌ನಲ್ಲಿ ಅನೇಕ ಸಾರ್ವಜನಿಕ ಕಾಲುದಾರಿಗಳು ಮೂತ್ರದಿಂದ ಕಲೆಯಾಗಿವೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)