ನ್ಯೂಸ್

ಮೊಪೆಡ್‌ನೊಂದಿಗೆ ಮಿನಿ ಡಿಜೆ; 6.6 ಮಿಲಿಯನ್​​ ಮಂದಿ ಮೆಚ್ಚಿರುವ ವಿಡಿಯೋ | Viral Video

ಮದುವೆ ಸಮಾರಂಭದಲ್ಲಿ ಇತ್ತೀಚೆಗೆ ಡಿಜೆ ಮಿಸ್​​ ಆಗುವುದೆ ಇಲ್ಲ. ದಿನದಿಂದ ದಿನಕ್ಕೆ ಡಿಜೆ ಕ್ರೇಜ್​ ಹೆಚ್ಚುತ್ತಲೆ ಇದೆ. ಮದುವೆ ಮನೆಯಲ್ಲೆ ಆದರೂ ಒಂದು ನಿಗದಿತ ಸ್ಥಳದಲ್ಲಿ ಡಿಜೆ ಆಯೋಜಿಸುತ್ತಾರೆ. ಆದರೆ ನೀವು ಎಂದಾದರೂ 'ಎಕ್ಸ್‌ಎಲ್ ಬೈಕ್​​ ಡಿಜೆ' ನೋಡಿದ್ದೀರಾ? ಇಲ್ಲ ಎಂದರೆ ನಿಮಗೆ ಅವಕಾಶವಿದೆ. ಹೇಗೆ ಎಂದು ಆಲೋಚಿಸುತ್ತಿದ್ದೀರಾ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಅದರಲ್ಲಿ ನೀವು ಎಕ್ಸ್​ಎಲ್​ ಬೈಕ್​​ ಡಿಜೆಯನ್ನು ಖಂಡಿತವಾಗಿಯೂ ನೋಡಬಹುದು. (Viral Video)

ವೈರಲ್​ ಆಗಿರುವ ವಿಡಿಯೋದಲ್ಲಿ ಎಕ್ಸ್‌ಎಲ್ ಬೈಕ್ ಅಥವಾ ಮೊಪೆಡ್‌ನ ಹಿಂದಿನ ಸೀಟಿನಲ್ಲಿ ಎರಡು ದೊಡ್ಡ ಸ್ಪೀಕರ್‌ಗಳನ್ನು ಒಂದರ ಹಿಂದೆ ಒಂದರಂತೆ ಕಟ್ಟಿರುವುದನ್ನು ನೋಡಬಹುದು. ಅದರ ಜತೆಗೆ ಅದ್ಭುತವಾಗಿ ಲೈಟ್​ಗಳನ್ನು ಅಳವಡಿಸಲಾಗಿದೆ. ಸಾಂಗ್​ನೊಂದಿಗೆ ಲೈಟ್​ಗಳು ಹೊಂದಾಣಿಕೆಯಾಗಿ ಕಾಣಿಸುತ್ತದೆ. ಪ್ರಸ್ತುತ ಮೊಪೆಡ್​ ಡಿಜೆಗೆ ಜಾಲತಾಣದಲ್ಲಿ ಅತಿ ಹೆಚ್ಚು ಕ್ರೇಜ್​​ ಇದೆ. ಬೈಕ್​​ನ ನಂಬರ್ ಪ್ಲೇಟ್​ನಿಂದ ಈ ವಿಡಿಯೋ ಎಪಿ ಅಂದರೆ ಆಂಧ್ರಪ್ರದೇಶದ್ದು ಇರಬಹುದೆಂದು ಊಹಿಸಲಾಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು ಇದುವರೆಗೂ 6.6 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಹಾಗೂ 3 ಲಕ್ಷ 16 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ. ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದು, ಎಕ್ಸ್‌ಎಲ್ ಬೈಕ್ ಅಲ್ಲ ಆದರೆ ಡಿಜೆ ವಾಹನ, ಮಿನಿ ಡಿಜೆ, ಒಂದು ರಾತ್ರಿಗೆ ಹಣವೆಷ್ಟು, ನಾನು ನನ್ನ ಸ್ನೇಹಿತನ ಮದುವೆಗೆ ಡಿಜೆ ಬುಕ್ ಮಾಡಲು ಬಯಸುತ್ತೇನೆ, ದಯವಿಟ್ಟು ನಿಮ್ಮ ನಂಬರ್​ ಹಂಚಿಕೊಳ್ಳಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.