ಲಖನೌ: ರೊಟ್ಟಿ ತಯಾರಿಸುವ ಮೊದಲು ಮನೆಯಲ್ಲಿ ಹಿಟ್ಟನ್ನು ಜರಡಿ ಮೂಲಕ ಶೋಧಿಸಿದ ನಂತರ ಬಳಸಲಾಗುತ್ತದೆ. ಇದರಿಂದ ಅದರ ಹೊಟ್ಟು ತೆಗೆದು ಉತ್ತಮ ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಆದರೆ ಹೋಟೆಲ್ ಆಹಾರವನ್ನು ಹೇಗೆ ತಯಾರಿಸಲಾಗುತ್ತದೆ? ಹೋಟೆಲ್ ಅಥವಾ ಧಾಬಾದಲ್ಲಿ ತೆರೆದ ಅಡುಗೆಮನೆ ಸೌಲಭ್ಯವಿಲ್ಲದಿದ್ದರೆ ಇದು ತಿಳಿಯುವುದಿಲ್ಲ. ಧಾಬಾಗಳಲ್ಲಿ ರೊಟ್ಟಿಯನ್ನ ಹೇಗೆ ತಯಾರಿಸಲಾಗುತ್ತದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗಿದೆ.
ಇದನ್ನು ಓದಿ: ಸೇಡಿಗಾಗಿ ಮಾಜಿ ಬಾಯ್ಫ್ರೆಂಡ್ ಮನೆಗೆ 100 ಪಿಜ್ಜಾ ಆರ್ಡರ್ ಮಾಡಿದ ಗೆಳತಿ; Viral Video ನೋಡಿ ನೆಟ್ಟಿಗರು ಸಿಡಿಮಿಡಿ
ಆದರೆ ಈ ವಿಡಿಯೋದಲ್ಲಿ ತೋರಿಸಿರುವಂತೆ ಎಲ್ಲಾ ಧಾಬಾಗಳಲ್ಲಿ ಹೀಗೆಯೆ ಮಾಡುತ್ತಾರೆ ಎಂದ ಹೇಳುತ್ತಿಲ್ಲ. ಕೆಲವು ಧಾಬಾ ಮತ್ತು ಹೋಟೆಲ್ಗಳಲ್ಲಿ ಈ ರೀತಿಯಲ್ಲಿ ತಯಾರಿಸಬಹುದು. ಆದ್ದರಿಂದ ಊಟಕ್ಕೂ ಮುನ್ನ ಒಮ್ಮೆ ತಯಾರಿಸುವ ಜಾಗವನ್ನು ನೋಡಿ ಎಂಬುದು ನಮ್ಮ ಸಲಹೆ.
ಧಾಬಾಗಳಲ್ಲಿ ಹೆಚ್ಚಾಗಿ ಅಡುಗೆಮನೆ ಹೊರಗೆ ಇರುತ್ತದೆ. ಧಾಬಾಗಳಲ್ಲಿ ಊಟ ಮಾಡಲು ಬಯಸುವವರು ಅಲ್ಲಿ ತಯಾರಿಸಲಾಗುತ್ತಿರುವ ಭಕ್ಷ್ಯಗಳ ಶುಚಿತ್ವವನ್ನು ಪರಿಶೀಲಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅದನ್ನೇ ಮಾಡಿದ್ದಾರೆ. ಆತ ಧಾಬಾಗೆ ಹೋಗಿ ರೊಟ್ಟಿಗಾಗಿ ಹಿಟ್ಟು ಸಿದ್ಧಪಡಿಸುತ್ತಿರುವ ವಿಡಿಯೋವನ್ನು ಮಾಡಿದ್ದಾರೆ. ಅವರು ಈ ಧಾಬಾ ಕಾನ್ಪುರದ ಪ್ರಯಾಗ್‌ರಾಜ್ ರಸ್ತೆಯಲ್ಲಿದೆ ಎಂದು ಹೇಳುತ್ತಾರೆ.
ವೈರಲ್ ವಿಡಿಯೋದಲ್ಲಿ ಧಾಬಾದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಹಿಟ್ಟನ್ನು ಹೇಗೆ ಸಿದ್ಧಪಡಿಸುತ್ತಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ದೊಡ್ಡ ತಟ್ಟೆಯಲ್ಲಿ ಹಿಟ್ಟನ್ನು ಬೆರೆಸುವಾಗ ಆ ವ್ಯಕ್ತಿಯು ಹಿಟ್ಟಿಗೆ ನೀರು ಸೇರಿಸುತ್ತಾನೆ. ಆದರೆ ಅವನು ನೀರನ್ನು ಬೆರೆಸಲು ಯಾವುದೇ ಜಗ್ ಅಥವಾ ಶುದ್ಧ ಪಾತ್ರೆಯನ್ನು ಬಳಸುವುದಿಲ್ಲ. ಬದಲಾಗಿ ನೆಲದ ಮೇಲೆ ಬಿದ್ದ ಕೊಳಕು ನೀರನ್ನು ಹೆಕ್ಕುವ ಮೂಲಕ ಹಿಟ್ಟನ್ನು ಬೆರೆಸಲು ಪ್ರಾರಂಭಿಸುತ್ತಾನೆ.
ಇದನ್ನು ನೋಡಿ ವಿಡಿಯೋ ಮಾಡುವ ವ್ಯಕ್ತಿ ಗೊಂದಲದಿಂದ ಆತನ ಬಳಿ ಹೋಗಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾನೆ. 'ನೀನು ಕೊಳಕು ನೀರಿನಲ್ಲಿ ಹಿಟ್ಟನ್ನು ಬೆರೆಸುತ್ತಿದ್ದೀಯಾ?' ಇದು ಸರಿಯೋ ತಪ್ಪೋ.' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆತ ಮೆಲುದನಿಯಲ್ಲಿ ಇದು ತಪ್ಪು ಎಂದು ಹೇಳುತ್ತಾರೆ. ಅದರ ನಂತರ ಅವನು ಅಲ್ಲಿಂದ ಹೊರಟು ಹೋಗುತ್ತಾನೆ. ಸುಮಾರು 80 ಸೆಕೆಂಡುಗಳ ಕ್ಲಿಪ್ ಇದರೊಂದಿಗೆ ಕೊನೆಗೊಳ್ಳುತ್ತದೆ.
ಇದುವರೆಗೂ ಈ ವಿಡಿಯೋವನ್ನು 3.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆದರೆ ಯಾರೋಬ್ಬರು ಈ ವಿಡಿಯೋಗೆ ಪ್ರತಿಕ್ರಿಯಿಸಿಲ್ಲ ಅಥವಾ ಕಾಮೆಂಟ್ ಮಾಡಿಲ್ಲ.(ಏಜೆನ್ಸೀಸ್)