ನ್ಯೂಸ್

ಭೀಕರ ಅಪಘಾತವಾಗುವುದರಿಂದ ಜಸ್ಟ್​ ಮಿಸ್​​​; Viral Video ಆತಂಕ ಹುಟ್ಟಿಸುವುದು ಗ್ಯಾರಂಟಿ

ಧರ್ಮಶಾಲಾ: ಮನಾಲಿಯಲ್ಲಿ ಹಿಮಪಾತದ ಸಮಯದಲ್ಲಿ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಹಿಮವು ಪ್ರವಾಸಿ ಸ್ಥಳಗಳು ಮತ್ತು ಅಲ್ಲಿನ ರಸ್ತೆಗಳನ್ನು ಆವರಿಸುತ್ತದೆ. ಡಿಸೆಂಬರ್ ಮತ್ತು ಮಾರ್ಚ್ ನಡುವಿನ ಹಿಮಪಾತದ ಸಮಯದಲ್ಲಿ ಮನಾಲಿಗೆ ಭೇಟಿ ನೀಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅಲ್ಲಿನ ಹವಾಮಾನವನ್ನು ಆನಂದಿಸಲು ಸಂಪೂರ್ಣ ಅವಕಾಶ ಸಿಗುತ್ತದೆ. ಆದರೆ ಈ ಮಧ್ಯೆ ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಚಾಲನೆ ಮಾಡುವುದು ಸಾಕಷ್ಟು ಸವಾಲಿನ ಕೆಲಸವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೆ(Viral Video) ಅದಕ್ಕೆ ನಿದರ್ಶನ.

ವೈರಲ್​ ವಿಡಿಯೋದಲ್ಲಿ ಹಿಮ ತುಂಬಿದ ರಸ್ತೆಯಲ್ಲಿ ಕ್ರೆಟಾ ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಕಾರನ್ನ ಪಾರ್ಕಿಂಗ್​ ಮಾಡಲಾಗದೆ ಕಾರು ಅಲ್ಲಿಂದ ಜಾರುತ್ತಾ ಮುಂದೆ ಸಾಗುತ್ತದೆ. ಹೊರಗಿದ್ದವರು ಬ್ರೇಕ್​ ಹಾಕುವಂತೆ ಡ್ರೈವಿಂಗ್ ಮಾಡುತ್ತಿದ್ದವರಿಗೆ ತಿಳಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಭೀಕರ ಅಪಘಾತ ಸಂಭವಿಸುವ ಮುನ್ನವೆ ಅದೃಷ್ಟವಶಾತ್​​ ಬಚಾವ್​ ಆದಂತೆ ಅನ್ನಿಸುವುದನ್ನು ನೀವು ನೋಡಬಹುದು.

ಈ ವಿಡಿಯೋವನ್ನು ಇದುವರೆಗೂ 2 ಕೋಟಿ 71 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕ್ರೆಟಾ ಡ್ರೈವರ್ ಯಾರನ್ನು ನಂಬಬೇಕೆಂದು ಯೋಚಿಸುತ್ತಿದ್ದನು, ಈ ಸ್ಥಳದಲ್ಲಿ ಲಾರ್ಡ್ ಆಲ್ಟೊ ಮಾತ್ರ ಚಲಾಯಿಸಬಹುದ, ಹೆಚ್ಚಿನ ಚಾಲಕರು ವಿಜ್ಞಾನ ತರಗತಿಗಳನ್ನು ಏಕೆ ಬಿಟ್ಟುಬಿಟ್ಟಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ.(ಎಜೆನ್ಸೀಸ್​​)