ನ್ಯೂಸ್

Viral Video | ‘ಮಹಾಭಾರತ’ ಟೈಟಲ್ ಟ್ರ್ಯಾಕ್​ಗೆ ಹುಡುಗಿಯರ ನೃತ್ಯ; ಡ್ಯಾನ್ಸ್​​ಗೆ ನೆಟ್ಟಿಗರ​​ ಪ್ರಶಂಸೆ

ಪ್ರತಿ ವರ್ಷ ತರಗತಿಗಳು ಮುಗಿದು ಮುಖ್ಯ ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ನಡೆಯುವ ಕಾರ್ಯಕ್ರಮ ಶಾಲಾ ವಾರ್ಷಿಕೋತ್ಸವ ಯಾರಿಗೆ ನೆನೆಪಿರಲ್ಲ ಹೇಳಿ. ಸಮಾರಂಭದಲ್ಲಿ ಡ್ಯಾನ್ಸ್​, ಡ್ರಾಮಾ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಹೀಗೆ ಹಲವು ಭಾಗಗಳಿರುತ್ತವೆ. ಈಗ ಇದನ್ನು ಹೇಳಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.

ವೈರಲ್​ ವಿಡಿಯೋದಲ್ಲಿ ಹುಡುಗಿಯರು ಟೀಂ ಮಹಾಭಾರತದ ಟೈಟಲ್​ ಟ್ರ್ಯಾಕ್​ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲರು ಕೆಂಪು ಬಣ್ಣದ ಬಟ್ಟೆ ತೊಟ್ಟು ಮಹಾಭಾರತದ ಸಾರಾಂಶವನ್ನು ತಿಳಿಸುವ ಹಾಡಿಗೆ ಹೆಜ್ಜೆ ಹಾಕುತ್ತಾ ಹೃದಯಸ್ಪರ್ಶಿಯಾಗುವಂತ ಅದ್ಭುತ ಪ್ರದರ್ಶನ ನೀಡಿದ್ದಾರೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ‘ಹೈ ಕಥಾ ಸಂಗ್ರಾಮ್ ಕಿ’ ಹಾಡಿನ ಈ ಅಭಿನಯವನ್ನು ನೀವೂ ಹೊಗಲದೆ ಇರಲು ಸಾಧ್ಯವಾಗುವುದಿಲ್ಲ, ಇದು ಉತ್ತಮ ನೃತ್ಯ, ಇದನ್ನು ನೋಡಿದ ನಂತರ ನಿಜಕ್ಕೂ ನನಗೆ ಗೂಸ್ಬಂಪ್ಸ್ ಬಂತು, ಎಲ್ಲರೂ ಚೆನ್ನಾಗಿ ಮಾಡಿದ್ದಾರೆ, ಅತ್ಯುತ್ತಮ ಶಿಕ್ಷಕರು ಮತ್ತು ಶಾಲೆಯನ್ನು ಪ್ರಶಂಸಿಸಬೇಕು, ಇತರ ಶಾಲೆಗಳು ಸಹ ಕಲಿಯಬೇಕು ಎಂದು ಕಾಮೆಂಟ್​​ ಮಾಡಿದ್ದಾರೆ.