ನ್ಯೂಸ್

ಬೈಕ್ ಸವಾರನ ತಪ್ಪಿನಿಂದ ಬಸ್ ಪಲ್ಟಿ; Viral Video ನೋಡಿ ಬೈಕರ್​​ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯ

ಮುಂಬೈ: ರಸ್ತೆಯಲ್ಲಿ ಅಪಘಾತವಾಗುವುದು ಯಾವುದಾದರೂ ಒಬ್ಬ ವ್ಯಕ್ತಿಯ ತಪ್ಪಿನಿಂದಲೇ ಆಗಿರುತ್ತದೆ, ಆಕಸ್ಮಿಕವಾಗಿ ಆಗುವಂತಹ ಆ್ಯಕ್ಸಿಡೆಂಟ್​ ಬಹಳ ಅಪರೂಪ. ಅದಕ್ಕೆ ಹೇಳುವುದು ಡ್ರೈವಿಂಗ್​ ಮಾಡುವಾಗ ಎಚ್ಚರವಿರಬೇಕು ಅಥವಾ ವೇಗದ ಚಾಲನೆ ಬೇಡ ಎಂದು ಹೇಳುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿಯ ತಪ್ಪಿನಿಂದ ಬಸ್​​​ ಪಲ್ಟಿ ಹೊಡೆದಿದೆ.

ವೈರಲ್ ವಿಡಿಯೋದಲ್ಲಿ ಒಬ್ಬ ಬೈಕ್ ಸವಾರ ಇದ್ದಕ್ಕಿದ್ದಂತೆ ರಸ್ತೆ ದಾಟಲು ಪ್ರಯತ್ನಿಸುವುದನ್ನು ನೋಡಬಹುದು. ಆದರೆ ಅಷ್ಟರಲ್ಲಿ ಹಿಂದಿನಿಂದ ಒಂದು ಪ್ಯಾಸೆಂಜರ್ ಬಸ್ ಸಾಮಾನ್ಯ ವೇಗದಲ್ಲಿ ಬರುತ್ತಿದೆ. ಬೈಕ್ ಸವಾರನನ್ನು ಉಳಿಸಲು ಬಸ್ ಚಾಲಕ ಬ್ರೇಕ್ ಹಾಕಿ ಬಲಭಾಗಕ್ಕೆ ಚಲಿಸುತ್ತಾನೆ. ಇದರಿಂದಾಗಿ ಬಸ್ ಪಲ್ಟಿಯಾಗುತ್ತದೆ. ಈ ವಿಡಿಯೋ ಮಹಾರಾಷ್ಟ್ರದ್ದೂ ಎನ್ನಲಾಗಿದೆ.

ಈ 25 ಸೆಕೆಂಡ್​ಗಳ ವಿಡಿಯೋವನ್ನು ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಅನೇಕರಲ್ಲಿ ಬೈಕ್​​​ ಸವಾರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)