ನ್ಯೂಸ್

ಮೇಲಿನಿಂದ ಬೀಳುತ್ತಿದ್ದ ಶ್ವಾನ ಕಾಪಾಡಲು ಮಹಿಳೆಯ ಹರಸಾಹಸ; Viral Video ನೋಡಿ ಶಹಬ್ಬಾಸ್​ ಎಂದ ನೆಟ್ಟಿಗರು

ಸಾಕು ನಾಯಿಗಳು ಕೆಲವೊಮ್ಮೆ ಆಟವಾಡುವಾಗ ಉತ್ಸಾಹದಿಂದ ಎಲ್ಲೋ ಹೋಗುತ್ತವೆ. ಅಪಾಯದ ಸ್ಥಿತಿಗೆ ತಲುಪಿದಾಗ ಅದನ್ನು ಕಾಪಾಡಲು ಮಾಡುವ ಪ್ರಯತ್ನ ಹೇಳುವುದು ಅಸಾಧ್ಯ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗಿದೆ. ಈ ವಿಡಿಯೋ ಬ್ರೆಜಿಲ್​​​ನದ್ದು ಎಂದು ಹೇಳಲಾಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಟ್ಟಡದ ಮೇಲೆ ನಾಯಿ ನೇತಾಡುತ್ತಿರುವುದನ್ನು ನೋಡಬಹುದು. ಆ ಸಮಯದಲ್ಲಿ ಅದು ಸ್ವತಃ ತುಂಬಾ ಚಿಂತಿಮಾಡುತ್ತಿರುತ್ತದೆ ಮತ್ತು ಭಯಪಡುತ್ತಿರುತ್ತದೆ. ಬಹುಶಃ, ಅಲ್ಲಿಂದ ಕೆಳಗೆ ಬೀಳುವುದರ ಪರಿಣಾಮಗಳು ಶ್ವಾನಕ್ಕೂ ತಿಳಿದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ಅದು ಕಟ್ಟಡದ ಕಿಟಕಿಯನ್ನು ಬಿಗಿಯಾಗಿ ಹಿಡಿದಿರುತ್ತದೆ. ಜನರು ಕೂಗುತ್ತಿರುವ ಶಬ್ದವೂ ವಿಡಿಯೋದಲ್ಲಿ ಕೇಳಿಬರುತ್ತಿದೆ. ಇದರಲ್ಲಿ ಜನರು ತೀವ್ರ ಚಿಂತಿತರಾಗಿರುವುದು ಕಂಡುಬರುತ್ತದೆ.

ಆದರೆ ನಾಯಿ ನೇತಾಡುತ್ತಿರುವ ಕಿಟಕಿಯ ಸ್ವಲ್ಪ ಕೆಳಗೆ ಒಬ್ಬ ಮಹಿಳೆ ಕಿಟಕಿಯ ನೆಲದ ಮೇಲೆ ನಿಂತು ಅದರ ಜೀವ ಉಳಿಸಲು ರಟ್ಟಿನ ಪೆಟ್ಟಿಗೆಯನ್ನು ಹಿಡಿದಿದ್ದಾಳೆ. ನಾಯಿ ಕೆಳಗೆ ಬಿದ್ದ ತಕ್ಷಣ ಆಜೆ ಹಿಡಿದುಕೊಂಡಿದ್ದ ರಟ್ಟಿನೊಳಗೆ ಬೀಳುತ್ತದೆ. ಬಳಿಕ ಆ ಮಹಿಳೆ ಆ ನಾಯಿಯನ್ನು ತನ್ನ ಮನೆಯೊಳಗೆ ಕರೆತರುತ್ತಾಳೆ. ಇದರೊಂದಿಗೆ ಈ ಹೃದಯಸ್ಪರ್ಶಿ 34 ಸೆಕೆಂಡುಗಳ ವಿಡಿಯೋ ಕೊನೆಗೊಳ್ಳುತ್ತದೆ.

ಇಲ್ಲಿಯವರೆಗೆ ಈ ವಿಡಿಯೋವನ್ನು 1 ಲಕ್ಷ 16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಶಹಬ್ಬಾಸ್​ ಹೇಳಲೇಬೇಕು, ಆ ನಾಯಿ ಅಲ್ಲಿಗೆ ಹೇಗೆ ತಲುಪಿತು?, ಎಂತಹ ಕ್ಯಾಚ್, ಕುಟುಂಬವು ಸ್ಪೈಡರ್ ಮ್ಯಾನ್ ನೋಡುವುದನ್ನು ನಿಲ್ಲಿಸಬೇಕು, ನಾಯಿಗೂ ಹೊಸ ಐಡಿಯಾಗಳು ಬರುತ್ತಿವೆ ಆದರೆ ಅದು ಏಕೆ ಹೊರಗಿನ ಕಟ್ಟಡದ ಬದಿಯನ್ನು ಏಕೆ ಹತ್ತುತ್ತಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ.