ನ್ಯೂಸ್

ರೈಲಿನ ಇಂಜಿನ್‌ನ ಛಾವಣಿಯ ಮೇಲೆ ಮಲಗಿ ಪ್ರಯಾಣಿಸಿದ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ...

ಢಾಕಾ: ಸಾಮಾನ್ಯವಾಗಿ ಟಿಕೆಟ್ ತೆಗೆದುಕೊಂಡ ನಂತರ ಪ್ರಯಾಣಿಕರು ರೈಲುಗಳಲ್ಲಿ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ಸೀಟು ಸಿಗದಿದ್ದರೆ ನಿಂತಲ್ಲೇ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಕೆಲವರು ನಿಯಮಗಳನ್ನು ಉಲ್ಲಂಘಿಸಿ ರೈಲು ಗೇಟ್‌ನಲ್ಲಿ ನೇತಾಡುತ್ತಾ ಅಥವಾ ಕಾಲುಗಳನ್ನು ತೂಗಾಡುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video)​ ಆಗಿದೆ. ಅದರಲ್ಲಿ ವ್ಯಕ್ತಿಯೊಬ್ಬರು ರೈಲಿನ ಇಂಜಿನ್​ ಮೇಲ್ಛಾವಣಿ ಮೇಲೆ ಪ್ರಯಾಣಿಸುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ರೈಲಿನ ಇಂಜಿನ್‌ ಮೇಲ್ಛಾವಣಿಯ ಮೇಲೆ ಮಲಗಿ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಆತ 'ಸಹೋದರ! ಪ್ರಸ್ತುತ ನಾನು ಬಾಂಗ್ಲಾದೇಶದಲ್ಲಿ ರೈಲು ಎಂಜಿನ್‌ನ ಛಾವಣಿಯ ಮೇಲೆ ಪ್ರಯಾಣಿಸುತ್ತಿದ್ದೇನೆ. 'ಇದನ್ನು ನೀವು ಪ್ರಯತ್ನಿಸಬೇಡಿ, ನಾನು ತುಂಬಾ ಅಪಾಯದಿಂದ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ಕಾಣಬಹುದು.

ಸುಮಾರು 21 ಸೆಕೆಂಡುಗಳ ಈ ವಿಡಿಯೋವನ್ನು ಇದುರವೆರೆಗೂ 1 ಕೋಟಿ 40 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 3 ಲಕ್ಷ 31 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿಯ ವಿಡಿಯೋವನ್ನು ಕೆಲವರು ಎಂಜಾಯ್​ ಮಾಡುತ್ತಿದ್ದರೆ ಮತ್ತೊಂದೆಡೆ ಮಾನಸಿಕ ಕಾಯಿಲೆ ಇರಬಹುದು ಆಸ್ಪತ್ರೆಗೆ ಹೋಗಬೇಕೆಂದು ಹೇಳಿದ್ದಾರೆ. ನಿಮ್ಮ ಕೊನೆಯ ಪ್ರಯಾಣವು ಆಹ್ಲಾದಕರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ, ಇಡೀ ದೇಶದಲ್ಲಿ ನಿಮ್ಮನ್ನು ಬ್ಯಾನ್ ಮಾಡುವಂತಹ ಕೆಲಸವನ್ನು ಮಾಡಿ, ನೀವು ಬಾಂಗ್ಲಾದೇಶದಲ್ಲಿದ್ದೀರಿ ಅದು ದೊಡ್ಡ ಅಪಾಯ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​​)