ನ್ಯೂಸ್

ರೀಲ್​​ನಲ್ಲಿ ರಿಯಲ್​ ಆಗಿ ಕೈ-ಕೈ ಮಿಲಾಯಿಸಿದ ರಾಮ-ರಾವಣ ಪಾತ್ರಧಾರಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ | Viral Video

ಲಖನೌ: ನವರಾತ್ರಿಯ ಸಮಯದಲ್ಲಿ ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ರಾಮಲೀಲಾವನ್ನು ಆಯೋಜಿಸಲಾಗಿದೆ. ರಾಮಲೀಲಾದಲ್ಲಿ ಕಲಾವಿದರು ಶ್ರೀರಾಮ, ಸೀತೆ, ಲಕ್ಷ್ಮಣ, ರಾವಣ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ರಾಮಲೀಲಾ ನಾಟಕಕ್ಕೆ ಸಂಬಂಧಿಸಿದಂಥೆ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದಿಂದ ಬಂದಿದೆ ಎನ್ನಲಾಗಿದೆ.

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿಜಯದಶಮಿಯ ದಿನದಂದು ರಾಮಲೀಲಾ ನಾಟಕವನ್ನು ಪ್ರದರ್ಶಿಸಲಾಗಿದೆ. ರಾಮ ಮತ್ತು ರಾವಣನ ನಡುವಿನ ಯುದ್ಧದ ಸಮಯದಲ್ಲಿ ಇದ್ದಕ್ಕಿದ್ದಂತೆ ಇಬ್ಬರೂ ನಟರು ವೈಯಕ್ತಿಕ ಜಗಳಕ್ಕೆ ಇಳಿದಿದ್ದಾರೆ. ಜಗಳವೂ ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ನಾಟಕಕ್ಕೆ ಅಲಂಕರಿಸಿರುವ ವೇದಿಕೆಯನ್ನು ಕಾಣಬಹುದು. ರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿದೆ. ಲಕ್ಷ್ಮಣ ಕೂಡ ಇದ್ದಾನೆ. ರಾಮ, ಲಕ್ಷ್ಮಣ, ರಾವಣನ ನಡುವಿನ ಯುದ್ಧ ನಡೆಯುವ ದೃಶ್ಯದ ಸಮಯದಲ್ಲಿ ರಾವಣ ಪಾತ್ರಧಾರಿಯು ರಾಮನ ಪಾತ್ರ ಮಾಡುತ್ತಿದ್ದವರನ್ನು ತಳ್ಳುತ್ತಾನೆ. ಬ್ಯಾಲೆನ್ಸ್​ ತಪ್ಪಿ ರಾಮ ಪಾತ್ರಧಾರಿ ಕೆಳಗೆ ಬೀಳುವುದನ್ನು ನೋಡಬಹುದು. ಕೋಪಗೊಂಡ ರಾಮ ಪಾತ್ರಧಾರಿ ರಾವಣ ಪಾತ್ರಧಾರಿ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಇಬ್ಬರೂ ಜಗಳ ಆರಂಭವಾಗುತ್ತಿದ್ದಂತೆ ಅಲ್ಲಿದ್ದವರು ವೇದಿಕೆ ಮೇಲೆ ಹೋಗಿ ಜಗಳ ನಿಲ್ಲಿಸಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾವಿರಾರು ಮಂದಿ ವೀಕ್ಷಿಸಿ ಲೈಕ್​ಗಳನ್ನು ನೀಡಿದ್ದಾರೆ. ರಾಮಾಯಣದಲ್ಲಿ ಮಹಾಭಾರತ ಇದು ತಪ್ಪು, ಹರಿದ್ವಾರದ ರಾಮಲೀಲಾಗೆ ಹೋಲಿಸಿದರೆ ಇದು ಏನೂ ಅಲ್ಲ, ಈ ವಿಷಯ ವೈಯಕ್ತಿಕವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​​)