ಡಮಾಸ್ಕಸ್: ಸಾಮಾನ್ಯವಾಗಿ ತರಕಾರಿಯನ್ನು ಅಂಗಡಿಯಲ್ಲಿಟ್ಟು ಅಥವಾ ಕೈಗಳಲ್ಲಿ ತಳ್ಳುವ ಬಂಡಿ ಮೇಲೆ ಇಟ್ಟು ಮಾರುವುದನ್ನು ನಾವು ನೋಡಿರುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಆ ಫೋಟೋ ನೋಡಿದ ಪ್ರತಿಯೊಬ್ಬರು ಹುಬ್ಬೇರಿಸುತ್ತಿದ್ದಾರೆ. ಅದಕ್ಕೆ ಕಾರಣ ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ. ಈ ಫೋಟೋ ವೈರಲ್(.(Viral Post) ಆಗಿರುವುದು ಸಿರಿಯಾದಿಂದ ಎನ್ನಲಾಗಿದೆ
ಹೌದು, ಸಿರಿಯಾದ ಡಮಾಸ್ಕಸ್‌ನಲ್ಲಿನ ಮಾರುಕಟ್ಟೆಯಲ್ಲಿ ಅಂಗಡಿಯವನ್ನು ತರಕಾರಿಯನ್ನು ಯುದ್ಧ ಟ್ಯಾಂಕರ್ ಮೇಲಿಟ್ಟು ಮಾರಾಟ ಮಾಡುತ್ತಿದ್ದಾನೆ. ಸ್ಥಳಿಯ ಅಂಗಡಿಯವನು ಸೋವಿಯತ್ ಕಾಲದ T-55 ಯುದ್ಧ ಟ್ಯಾಂಕ್ ಅನ್ನು ತರಕಾರಿ 'ಕಾರ್ಟ್' ಆಗಿ ಪರಿವರ್ತಿಸಿದ್ದಾನೆ. ಅಸಲಿಗೆ ಈ ಯುದ್ಧದ ಟ್ಯಾಂಕರ್ ಅನ್ನು ಹಿಂದೆ ಸಿರಿಯಾದ ಮಾಜಿ ಅಧ್ಯಕ್ಷ ಅಲ್-ಅಸ್ಸಾದ್ ಸೈನ್ಯದಿಂದ ಬಳಸಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಪೋಸ್ಟ್ನಲ್ಲಿ, ರಸ್ತೆಬದಿಯಲ್ಲಿ ಯುದ್ಧದ ಟ್ಯಾಂಕ್ ನಿಂತಿದ್ದು, ಅದರ ಮೇಲೆ ವಿವಿಧ ರೀತಿಯ ತರಕಾರಿಗಳನ್ನು ಇಡಲಾಗಿದೆ.
ಈ ಟ್ಯಾಂಕ್ ಒಮ್ಮೆ ಅಸ್ಸಾದ್ ಆಡಳಿತದ ಅಸಾಧಾರಣ ಮಿಲಿಟರಿ ಶಸ್ತ್ರಾಗಾರದ ಭಾಗವಾಗಿತ್ತು ಮತ್ತು ಮಿಲಿಟರಿ ಶಕ್ತಿಯ ಸಂಕೇತವಾಗಿತ್ತು. ಆದರೆ ಈಗ ತರಕಾರಿ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ಸ್ಥಳೀಯ ಅಂಗಡಿಕಾರರಿಗೆ ಇದು ವಿಶಿಷ್ಟವಾದ ಕಾರ್ಟ್ ಆಗಿ ಮಾರ್ಪಟ್ಟಿದೆ. ಸೋವಿಯತ್ ಯುಗದ T-55 ಮುಖ್ಯ ಯುದ್ಧ ಟ್ಯಾಂಕ್ ಅನ್ನು ಸಿರಿಯಾದ ಡಮಾಸ್ಕಸ್‌ನಲ್ಲಿ ತರಕಾರಿ ಅಂಗಡಿಯಾಗಿ ಬಳಸಲಾಗುತ್ತಿದೆ.(ಏಜೆನ್ಸೀಸ್)