Nepal : ಸಾಮಾಜಿಕ ಜಾಲತಾಣಗಳ ನಿಷೇಧದ ನಂತರ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ಪ್ರತಿಭಟನೆ ಮಧ್ಯೆ, ದೇಶದ ಪ್ರಧಾನಿ ಕೆ.ಪಿ. ಓಲಿ ದುಬೈಗೆ ತೆರಳುವ ಸಾಧ್ಯತೆಯಿದೆ ಇದೆ ಎಂದು ತಿಳಿದುಬಂದಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಮತ್ತು ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ವಿವಾದಾತ್ಮಕ ನಿಷೇಧದ ವಿರುದ್ಧ ಸೋಮವಾರ (ಸೆಪ್ಟೆಂಬರ್ 6) ಪ್ರತಿಭಟನೆ ತೀವ್ರವಾಗಿತ್ತು. ಈ ಪ್ರತಿಭಟನೆ ನಂತರ ಸರ್ಕಾರ ನಿಷೇಧವನ್ನು ತೆಗೆದುಹಾಕಿತು. ಆದರೆ, ಈ ಪ್ರತಿಭಟನೆ ವೇಳೆ ಸುಮಾರು 19 ಜನ ಸಾವನ್ನಪ್ಪಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: ಭಾರತದಲ್ಲಿ ಭೂಮಿಯೇ ಯುದ್ಧದ ಗೆಲುವಿನ ಸಂಕೇತವಾಗಿರಲಿದೆ; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ| Army Chief
ಈ ವಿಷಯದ ಕುರಿತು ಮಂಗಳವಾರ (ಸೆಪ್ಟೆಂಬರ್ 9) ಹೊಸ ಪ್ರತಿಭಟನೆಗಳು ಭುಗಿಲೆದ್ದವು. ಓಲಿ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಸುದ್ಧಿ ಸಂಸ್ಥೆಗೆ ತಿಳಿಸಿವೆ. ಹಾಗೇ ದೇಶದ ಪ್ರಧಾನಿ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಚರ್ಚೆ ಸಡೆಸಲು ಇಂದು ಸಂಜೆ 6 ಗಂಟೆಗೆ ತುರ್ತು ಸಭೆಯನ್ನು ಕರೆಯಲಾಗಿದೆ.
ಈ ಪರಿಸ್ಥಿತಿಯನ್ನು ಶಾಂತಗೊಳಿಸಲು ಮತ್ತು ಅರ್ಥಪೂರ್ಣ ತೀರ್ಮಾನವನ್ನು ಕಂಡುಹಿಡಿಯುವ ಸಲುವಾಗಿ ನಾನು ಸಂಬಂಧಿತ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಹಾಗಾಗಿ ಇಂದು ಸಂಜೆ 6 ಗಂಟೆಗೆ ನಾನು ಸರ್ವಪಕ್ಷ ಸಭೆಯನ್ನು ಕರೆದಿದ್ದೇನೆ. ಈ ಕಠಿಣ ಪರಿಸ್ಥಿತಿಯಲ್ಲಿ ಎಲ್ಲಾ ಸಹೋದರ ಸಹೋದರಿಯರು ಶಾಂತವಾಗಿರಲು ನಾನು ವಿನಂತಿಸುತ್ತೇನೆ ಎಂದು ಓಲಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಜಾದಲ್ಲಿರುವ ಹಮಾಸ್ ಉಗ್ರರನ್ನು ಸಂಪೂರ್ಣ ನಾಶ ಮಾಡುತ್ತೇವೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು| Benjamin Netanyahu
ಮಂಗಳವಾರದಂದು ಜನರಲ್ ಝಡ್ ಪ್ರತಿಭಟನೆ ವೇಳೆ 19 ಜನರು ಮೃತಪಟ್ಟ ನಂತರ ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧವನ್ನು ತೆಗೆದುಹಾಕಿತು. ಈ ವೇಳೆ ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ನಿಷೇಧವನ್ನು ಕೊನೆಗೊಳಿಸಲು ಕ್ರಮಗಳನ್ನು ಒತ್ತಾಯಿಸಿ ಪ್ರತಿಭಟನಾಕಾರರು ಬೀದಿಗಿಳಿದರು.
ಸೋಮವಾರ ಸಂಜೆ ನಡೆದ ತುರ್ತು ಕ್ಯಾಬಿನೆಟ್ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಆರಂಭಗೊಂಡಿದ್ದನ್ನು ಕೊನೆಗೊಳಿಸಲು ಸರ್ಕಾರ ನಿರ್ದಾರ ಮಾಡಿತು. ಈ ವೇಳೆ ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ನೋಂದಣಿ ಅವಶ್ಯಕತೆಗಳನ್ನು ಪಾಲಿಸುತ್ತಿಲ್ಲ ಎಂದು ಸರ್ಕಾರ ಆರೋಪಿಸಿದೆ. (ಏಜೆನ್ಸೀಸ್)