ನ್ಯೂಸ್

VIDEO| ದೆವ್ವ ಬಂತು ದೆವ್ವ!: ಕರೊನಾ ಲಾಕ್​ಡೌನ್ ಶುರುವಾದಾಗಿನಿಂದ ಈ ಗ್ರಾಮದಲ್ಲಿ ದೆವ್ವದ್ದೇ ಕಾಟ...

ಜಕಾರ್ತಾ: ಕರೊನಾ ಸೋಂಕು ಹರಡದಂತೆ ತಡೆಯಲು ಇಂಡೋನೇಷ್ಯಾದಲ್ಲೂ ಲಾಕ್​ಡೌನ್ ಘೋಷಣೆಯಾಗಿದೆ. ಇಲ್ಲೂ ಜನ ಲಾಕ್​ಡೌನ್ ನಿಯಮ ಉಲ್ಲಂಘಿಸುವುದು ನಡೆದೇ ಇದೆ. ರಾತ್ರಿ ಹೊತ್ತಲ್ಲಿ ಕೂಡ ಅಡ್ಡಾಡುವುದನ್ನು ನಿಲ್ಲಿಸುವುದಿಲ್ಲ. ವಿಶೇಷ ಅಂದರೆ ಇಲ್ಲಿ ಒಂದು ಗ್ರಾಮದಲ್ಲಿ ಸಿಕ್ಕಾಪಟ್ಟೆ ದೆವ್ವದ ಕಾಟ. ಆ ಗ್ರಾಮದಲ್ಲಿ ಮಾತ್ರವೇ ಗ್ರಾಮಸ್ಥರು ರಾತ್ರಿ ಹೊತ್ತು ಬೀದಿಗೆ ಇಳಿಯಲು ಹೆದರುತ್ತಿದ್ದಾರೆ!

ಯಾವುದು ಇದು ಗ್ರಾಮ ಅಂತೀರಾ- ಸೆಂಟ್ರಲ್ ಜಾವಾದ ಕೆಫು ಗ್ರಾಮ. ಲಾಕ್​ಡೌನ್ ನಿಯಮ ಕೊಂಚವಾದರೂ ಇಲ್ಲಿ ಪಾಲನೆಯಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿ ದೆವ್ವಗಳ ಓಡಾಟ ಶುರುವಾಗುತ್ತದೆ. ಮನೆಯಿಂದ ಹೊರಗೆ ಇಳಿದವರೂ ಬದುಕಿದೆಯಾ ಬಡಜೀವ ಅಂತ ಮತ್ತೆ ಮನೆಯೊಳಕ್ಕೆ ಸೇರಿಕೊಳ್ಳುತ್ತಾರೆ. ಇದರ ವಿಡಿಯೋ ಚಿತ್ರೀಕರಣವೂ ಲಭ್ಯವಿದೆ.

ನಿಜವಾದ ದೆವ್ವ ಅಂದುಕೊಂಡ್ರಾ.. ಅಲ್ವೇ ಅಲ್ಲ. ಲಾಕ್​ಡೌನ್ ನಿಯಮ ಉಲ್ಲಂಘನೆ ತಪ್ಪಿಸೋದಕ್ಕೆ ಮತ್ತು ಜನರನ್ನು ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು ಕೆಲವು ಸ್ವಯಂಸೇವಾ ಸಂಸ್ಥೆಗಳು ಕಂಡುಕೊಂಡ ಉಪಾಯವಿದು. ದೆವ್ವಗಳಂತೆ ಉಡುಪು ಧರಿಸಿ ಸ್ವಯಂ ಸೇವಕರು ರಾತ್ರಿ ಇಡೀ ನಿಗಾವಹಿಸುತ್ತಾರೆ. ಇವರೂ ಅಲ್ಲಿನ ಕರೊನಾ ವಾರಿಯರ್ಸ್​. ಇಂಡೋನೇಷ್ಯಾದ ಗ್ರಾಮೀಣ ಭಾಗದಲ್ಲಿ ಸದ್ಯ ಈ ಪ್ರಯೋಗ ನಡೆಯುತ್ತಿದೆ. ಇದರ ವಿವರ ಕೆಳಗಿನ ವಿಡಿಯೋದಲ್ಲಿದೆ ನೋಡಿ.. (ಏಜೆನ್ಸೀಸ್)