ನ್ಯೂಸ್

VIDEO | BBKS10: ಹೊರಗಡೆ ನನಗೂ 35 ಕಂಪನಿಯಿದೆ ಎಂಬ ವಿನಯ್​ ಹೇಳಿಕೆಗೆ ಇಶಾನಿ ಕೊಟ್ರು ಉತ್ತರ!

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10ರ ರಿಯಾಲಿಟಿ ಶೋನ ಆರನೇ ವಾರದಲ್ಲಿ ನಡೆದ ಡಬಲ್​ ಎಲಿಮಿನೇಷನ್​ನಲ್ಲಿ ಸ್ಪರ್ಧಿಗಳಾಗಿದ್ದ ಭಾಗ್ಯಶ್ರೀ ಮತ್ತು ಇಶಾನಿ ಹೊರಬಂದರು. ಬಿಗ್​ ಮನೆಯಿಂದ ಔಟ್​ ಆದ ಬಳಿಕ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ಇಶಾನಿ ಬಿಗ್​ಬಾಸ್​ ಮನೆಯೊಳಗಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಮನೆಯೊಳಗೆ ಇದ್ದ ಅಷ್ಟು ದಿನಗಳ ಪಯಣವನ್ನು ಮೆಲುಕು ಹಾಕಿದ ಇಶಾನಿ, ತಮಗೆ ಮನೆಯಲ್ಲಿ ಉಳಿಯಲು ಒಂದು ಚಾನ್ಸ್ ಕೊಡಬಹುದಿತ್ತು ಎಂದು ಅಭಿಪ್ರಾಯಿಸಿದರು. ಈ ಮಧ್ಯೆ ಪ್ರತಾಪ್ ಮತ್ತು ವಿನಯ್​​ ನಡುವೆ ಉಂಟಾದ ಒಂದು ಬಿರುಸಿನ ವಾಗ್ದಾಳಿಯಲ್ಲಿ ವಿನಯ್​ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್​ಗೆ ಗುರಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಶಾನಿ ಈಗ ಪ್ರತಿಕ್ರಿಯಿಸಿದ್ದಾರೆ.

ಡ್ರೋಣ್ ಪ್ರತಾಪ್​ಗೆ ಹೊರಗಡೆ ನನಗೂ 35 ಕಂಪೆನಿಯಿದೆ ಎಂದು ವಿನಯ್​​ ಹೇಳಿದ್ದನ್ನು ನೆನಪಿಸಿಕೊಂಡ ಇಶಾನಿ, "ಇದು ತುಂಬ ಹಾಸ್ಯಸ್ಪದವಾಗಿದೆ, ಟ್ರೋಲ್​ ಮಾಡಿದ್ದಾರೆ ಎಂದರೆ ಏನೂ ಹೇಳಲಿ? ಜನಗಳಿಗೆ ಏನು ಅನಿಸುತ್ತೋ ಅದನ್ನೇ ಮಾಡಿದ್ದಾರೆ" ಎಂದು ಹೇಳಿದರು. ಇತರೆ ಸ್ಪರ್ಧಿಗಳ ಕುರಿತು ಇಶಾನಿ ಬಿಚ್ಚಿಟ್ಟ ಹಲವು ಸಂಗತಿಗಳನ್ನು ತಿಳಿಯಲು ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ, ಪೂರ ವಿಶೇಷ ಸಂದರ್ಶನವನ್ನು ವೀಕ್ಷಿಸಿ.