ನ್ಯೂಸ್

ವಿಜಯಾನಂದ ಸಿನಿಮಾ ಬಿಡುಗಡೆ: ತುಮಕೂರಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

ತುಮಕೂರು: ಜಿಲ್ಲೆಯಾದ್ಯಂತ 9 ಚಿತ್ರಮಂದಿರಗಳಲ್ಲಿ 'ವಿಜಯಾನಂದ' ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಥಿಯೇಟರ್​ಗಳ ಬಳಿ ಪ್ಲೆಕ್ಸ್, ಕಟೌಟ್​ಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ‌‌ ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಹಿ ಹಂಚಿದರು.

ಡಾ.ವಿಜಯ ಸಂಕೇಶ್ವರ ಅವರು ಯುವಕರ ಸ್ಪೂರ್ತಿ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು. ಕುಟುಂಬ ಸಮೇತ ಬಂದು ಸಿನಿಮಾ ನೋಡಿ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಶುಭಕೋರಿದರು.

ತುಮಕೂರು ಜಿಲ್ಲೆಯ 9 ಚಿತ್ರಮಂದಿರಗಳಲ್ಲಿ ವಿಜಯಾನಂದ ಸಿನಿಮಾ ಬಿಡುಗಡೆಯಾಗಿದೆ.

ತುಮಕೂರು: ಐನಾಕ್ಸ್- ಎಸ್​.ಮಾಲ್

ತುಮಕೂರು: ಗಾಯಿತ್ರಿ ಚಿತ್ರಮಂದಿರ

ತಿಪಟೂರು: ಗಣೇಶ ಟಾಕೀಸ್

ಕುಣಿಗಲ್: ಪದ್ಮ ಸಿನಿಮಾಸ್

ಮಧುಗಿರಿ: ಶಾಂತಲಾ‌‌ ಚಿತ್ರಮಂದಿರ

ಕೊರಟಗೆರೆ: ಶಿವಗಂಗ‌ ಚಿತ್ರಮಂದಿರ

ಗುಬ್ಬಿ: ಚನ್ನಬಸವೇಶ್ವರ ಚಿತ್ರಮಂದಿರ

ಶಿರಾ: ಭಾಗ್ಯಲಕ್ಮೀ ಚಿತ್ರಮಂದಿರ

ತುರುವೇಕೆರೆ: ಕೃಷ್ಣ ಚಿತ್ರಮಂದಿರ