ನ್ಯೂಸ್

ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಡಾ.ವಿಜಯ ಸಂಕೇಶ್ವರ ಕುಟುಂಬಸ್ಥರು

ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಎಂ.ಡಿ.‌ ಡಾ. ಆನಂದ ಸಂಕೇಶ್ವರ ಹಾಗೂ ಕುಟುಂಬ ಸದಸ್ಯರು ಮತದಾನ ಮಾಡಿದರು.

ಹುಬ್ಬಳ್ಳಿಯ ಕೇಶ್ವಾಪುರದ ಶಿವಗಂಗಾ ಲೇಔಟ್‌ನ ಮತಗಟ್ಟೆಗೆ ಆಗಮಿಸಿದ ಡಾ. ವಿಜಯ ಸಂಕೇಶ್ವರ, ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ, ಪುತ್ರ ಡಾ. ಆನಂದ ಸಂಕೇಶ್ವರ ಮತ್ತು ಕುಟುಂಬದ ಇತರ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.