ಆಂಧ್ರಪ್ರದೇಶ: ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಮುಖ್ಯಭೂಮಿಕೆಯಲ್ಲಿ ನಟಿಸಿದ 'ಖುಷಿ' ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಇದೀಗ ಒಟಿಟಿ ವೇದಿಕೆಯಲ್ಲೂ ಈ ಚಿತ್ರ ರಿಲೀಸ್ ಆಗಿದ್ದು, ಸಿನಿಪ್ರೇಕ್ಷಕರು ಕೊಟ್ಟ ರೆಸ್ಪಾನ್ಸ್ಗೆ ನಟ ಭಾವುಕರಾಗಿದ್ದಾರೆ.
ಸೆಪ್ಟೆಂಬರ್ 1 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ ಚಿತ್ರ, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ವಿಯಾಯಿತು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಕಳೆದ ಒಂದೆರಡು ದಿನಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಪಾದಾರ್ಪಣೆ ಮಾಡುವ ಮೂಲಕ ಸಿನಿಪ್ರೇಕಕ್ಷರ ಮುಂದೆ ಬಹು ಭಾಷೆಗಳಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಾಯಿತು.
ಒಟಿಟಿಯಲ್ಲಿ ಬಿಡುಗಡೆಗೊಂಡ 'ಖುಷಿ' ಚಿತ್ರಕ್ಕೆ ದೊರೆತ ಅಭೂತಪೂರ್ವ ಬೆಂಬಲ ಕಂಡು ವಿಜಯ್ ದೇವರಕೊಂಡ ಭಾವುಕರಾಗಿದ್ದಾರೆ. “ಪ್ರೀತಿಗೆ ಭಾಷೆ ಗೊತ್ತಿಲ್ಲ, ಭಾವನೆಗಳಿಗೆ ಎಲ್ಲೆಯಿಲ್ಲ ಎಂಬ ನಂಬಿಕೆಯಿಂದ ‘ಖುಷಿ' ಮಾಡಿದ್ದೇವೆ. ಒಟಿಟಿ ರಿಲೀಸ್ಗೆ ಸಿಕ್ಕ ಅಗಾಧವಾದ ಪ್ರೀತಿಯು ನಂಬಲಾಗದಷ್ಟು ಸಂತೋಷ ನೀಡಿದೆ. ಈ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ, ಕನ್ನಡ ಅಥವಾ ಹಿಂದಿಯಲ್ಲಿ ನೋಡುತ್ತಿರಲಿ, ಇದು ನಮ್ಮ ಹೃದಯಕ್ಕೆ ತಂದಷ್ಟು ಖುಷಿಯನ್ನು ನಿಮ್ಮ ಹೃದಯಕ್ಕೂ ತರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಭಾವುಕವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯನ್ನು ನಿಂದಿಸಿದ ವ್ಯಕ್ತಿ; ಎಫ್ಐರ್ ದಾಖಲಿಸಿ ವ್ಯಕ್ತಿ ಅರೆಸ್ಟ್..!
ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡ ಈ ಚಿತ್ರ ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಸದ್ಯ ನಟನ ಮುಂದಿನ ಸಿನಿಮಾ 'ವಿಡಿ 12' ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅವರ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ,(ಏಜೆನ್ಸೀಸ್).