ನ್ಯೂಸ್

'ಲೈಗರ್'​ ಚಿತ್ರ ನನ್ನ ಫಸ್ಟ್​ ಫ್ಲಾಪ್ ಅಲ್ಲ: ನಟ ವಿಜಯ್​ ದೇವರಕೊಂಡ

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟಾರ್​ ನಟ ವಿಜಯ್​ ದೇವರಕೊಂಡ ಅಭಿನಯಿಸಿದ್ದ 'ಲೈಗರ್'​ ಚಿತ್ರ ಬಾಕ್ಸ್​ ಆಫೀಸ್​​ನಲ್ಲಿ ಫ್ಲಾಪ್​ ಆಗಿತ್ತು. ಈ ಬಗ್ಗೆ 'ಖುಷಿ' ಚಿತ್ರದ ಟ್ರೇಲರ್​ ಲಾಂಚ್​ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ, ಈ​ ಚಿತ್ರ ನನ್ನ ಮೊದಲ ಫ್ಲಾಪ್​ ಅಲ್ಲ ಎಂದು ಹೇಳಿದ್ದಾರೆ.

ವಿಜಯ್​ ದೇವರಕೊಂಡ ಮತ್ತು ಸಮಂತಾ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ 'ಖುಷಿ' ಚಿತ್ರದ ಟ್ರೇಲರ್​ ಲಾಂಚ್​ ವೇಳೆ ಸುದ್ದಿಗಾರರೊಬ್ಬರು ಲೈಗರ್​ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ನಿಮ್ಮ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಫ್ಲಾಪ್​ ಆಯಿತು. ಚಿತ್ರದ ಸೋಲಿನ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ನಟ ವಿಜಯ್​ ದೇವರಕೊಂಡ, "ಒಂದು ಸಿನಿಮಾ ಉತ್ತಮವಾಗಿ ಕೆಲಸ ಮಾಡಲಿಲ್ಲ ಎಂದಾಗ ಅದು ಬಹಳ ನೋವುಂಟು ಮಾಡುತ್ತದೆ. ಲೈಗರ್​​ಗಿಂತ ಹಿಂದಿನ ಚಿತ್ರಗಳು ಕೂಡ ಸೋಲನ್ನು ಕಂಡಿದೆ. ನಾನು ಈ ಹಿಂದೆ ಸಾಕಷ್ಟು ಫ್ಲಾಪ್‌ಗಳನ್ನು ಅನುಭವಿಸಿದ್ದೇನೆ. ಲೈಗರ್​ ಚಿತ್ರವೇ ಮೊದಲಲ್ಲ. ಸೋಲಿನ ಜತೆಗೆ ಗೆಲುವು ಎರಡನ್ನು ಸಹ ಮುಂದುವರಿಸುತ್ತೇನೆ" ಎಂದು ಹೇಳಿದರು,(ಏಜೆನ್ಸೀಸ್).