ನ್ಯೂಸ್

ಡೇಟಿಂಗ್ ಅಥವಾ ಮೀಟಿಂಗ್​​​?; ಹುಡುಗಿ ಜತೆಗಿನ ಐಐಟಿ ಬಾಬಾ ಹೊಸ Video Viral

ಮಹಾಕುಂಭ 2025ರಲ್ಲಿ ಬೆಳಕಿಗೆ ಬಂದ ಅಭಯ್​ ಸಿಂಗ್​ ಅಲಿಯಾಸ್​ ಐಐಟಿ ಬಾಬಾ ಪ್ರತಿದಿನ ಒಂದಲ್ಲಾ ಒಂದು ವಿಚಾರಕ್ಕೆ ಮುನ್ನೆಲೆಯಲ್ಲಿರುತ್ತಾರೆ. ಇತ್ತೀಚೆಗಷ್ಟೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಐಐಟಿ ಬಾಬಾ ಭವಿಷ್ಯ ನುಡಿದಿದ್ದಕ್ಕಾಗಿ ವ್ಯಾಪಕವಾಗಿ ಚರ್ಚಿಸಲ್ಪಟ್ಟರು. ಈ ಬಾರಿ ಅವರ ಮತ್ತೊಂದು ವಿಡಿಯೋ ವೈರಲ್​(Video Viral) ಆಗಿದೆ.

ವೈರಲ್​ ವಿಡಿಯೋದಲ್ಲಿ ಒಬ್ಬ ಮಹಿಳೆ ಐಐಟಿ ಬಾಬಾ ಅವರನ್ನು ಭೇಟಿ ಮಾಡಲು ಬಂದಿದ್ದಾರೆ, ಅವರು ತಮ್ಮೊಂದಿಗೆ ಹೂಗುಚ್ಛವನ್ನು ಸಹ ತಂದಿದ್ದಾರೆ. ಅಭಯ್ ಸಿಂಗ್ ಅಕಾ ಅಲಿಯಾಸ್​ ಐಐಟಿ ಬಾಬಾ ಹುಡುಗಿ ಕೊಟ್ಟ ಹೂಗುಚ್ಛವನ್ನು ಸ್ವೀಕರಿಸಿ ತನ್ನ ಮೂಗಿನ ಬಳಿಗೆ ತೆಗೆದುಕೊಂಡು ಅದರ ಪರಿಮಳವನ್ನು ಆನಂದಿಸುತ್ತಿರುವುದು ಕಾಣಬಹುದು. ಈ ಸಮಯದಲ್ಲಿ ಹುಡುಗಿ ಅವರೊಂದಿಗೆ ಕುಳಿತಿದ್ದಾಳೆ.

ಮತ್ತೊಂದು ವಿಡಿಯೋದಲ್ಲಿ ಐಐಟಿ ಬಾಬಾ ಒಬ್ಬ ಮಹಿಳೆಯನ್ನು ಭೇಟಿಯಾಗುವುದನ್ನು ಸಹ ಕಾಣಬಹುದು. ಈ ಸಮಯದಲ್ಲಿ ಮೇಜಿನ ಬಳಿ ಕುಳಿತಿರುವಾಗ ಅವನು ಆ ಮಹಿಳೆಯ ಮಾತನ್ನು ಗಮನವಿಟ್ಟು ಕೇಳುತ್ತಿರುವುದು ಕಂಡುಬರುತ್ತದೆ. ಐಐಟಿ ಬಾಬಾ ಪಕ್ಕದಲ್ಲಿ ಮತ್ತೊಬ್ಬ ಮಹಿಳೆ ಕೂಡ ಕುಳಿತಿದ್ದಾರೆ.

ಸದ್ಯ ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತೀವೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.