ಜೈಪುರ: ಹುಲಿ ಬೇಟೆಯಾಡುವ ಅಪರೂಪದ ಕ್ಷಣ ನೋಡುವುದೇ ಒಂದು ರೋಮಾಂಚನಕಾರಿ ವಿಷಯ. ಈ ದೃಶ್ಯ ಯಾವಾಗಲೂ ಕಂಡುಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಫಾರಿಗೆ ಹೋದಾಗ ಹುಲಿ ಬೇಟೆಯಾಡುವ ದೃಶ್ಯ ಕಣ್ಣೇದುರು ಬಂದರೆ ಹೇಗಿರುತ್ತದೆ ಊಹೆ ಮಾಡಿ ನೋಡಿ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಅಂತಹ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಪ್ರವಾಸಿಗರ ಮುಂದೆ ಹುಲಿ ಬೇಟೆಯಾಡುತ್ತಿರುವುದು ಕಂಡುಬಂದಿದೆ. ಆ ದೃಶ್ಯ ನೋಡಲು ಪ್ರವಾಸಿಗರ ವಾಹನಗಳು ನಿಲ್ಲುತ್ತವೆ. ಆದರೆ ಹುಲಿಯು ತನ್ನ ಸುತ್ತಲಿರುವ ಜನರ ಕಡೆ ಗಮನ ಹರಿಸದೆ ತನ್ನ ಬೇಟಿಯಾದ ಹುಲಿಯನ್ನು ಆಹಾರವನ್ನಾಗಿ ಮಾಡಿಕೊಳ್ಳುವುದರೆಡೆಗೆ ಗಮನ ಮತ್ತು ತನ್ನ ಶಕ್ತಿಯನ್ನೆಲ್ಲಾ ಕೇಂದ್ರಿಕರಿಸಿದೆ.
ಈ ವೇಳೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರ 2-3 ವಾಹನಗಳು ಹುಲಿ ಬೇಟೆಯಾಡುವುದನ್ನು ನೋಡಲು ನಿಂತಿರುವುದು ವಿಡಿಯೋದಲ್ಲಿ ನೋಡಬಹುದು. ಆದರೆ ಹುಲಿ ಪೂರ್ಣ ಉತ್ಸಾಹದಿಂದ ಬೇಟೆಯಲ್ಲಿ ತೊಡಗಿದೆ. ಸುಮಾರು 23 ಸೆಕೆಂಡುಗಳ ಈ ವಿಡಿಯೋ ನೋಡಿ ಹಲವರು ಪ್ರತಿಕ್ರಿಯಿಸಿದ್ದಾರೆ.
.ನೀವು ಆಹಾರವನ್ನು ತಿನ್ನುತ್ತಿರುವಾಗ ಅನೇಕರು ನಿಮ್ಮನ್ನು ನೋಡುತ್ತಿದ್ದರೆ ಅಥವಾ ಅದನ್ನು ರೆಕಾರ್ಡ್ ಮಾಡುತ್ತಿದ್ದರೆ ಏನೆನ್ನಿಸುತ್ತದೆ, ಇದು ಹುಲಿಯ ಮೇಲಿನ ಅಗೌರವವಾಗಿದೆ, ಕನಿಷ್ಠ ಪಕ್ಷ ಹುಲಿಗೆ ಆಹಾರ ಸೇವಿಸುವ ಖಾಸಗಿ ಸಮಯವನ್ನು ನೀಡಬೇಕಿತ್ತು, ಹುಲಿ ತುಂಬಾ ಹತ್ತಿರದಲ್ಲಿದೆ, ಇಲ್ಲಿ ಕಾರನ್ನು ನಿಲ್ಲಿಸುವುದು ಸಂಪೂರ್ಣವಾಗಿ ಅನಗತ್ಯವಾಗಿತ್ತು, ಹುಲಿಯ ಆವಾಸಸ್ಥಾನದ ಬಳಿ ಹೋಗಲು ನೀವು ಅನೇಕ ಜನರನ್ನು ಅನುಮತಿಸುತ್ತಿರುವುದು ಹಾಸ್ಯಾಸ್ಪದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್)