ನ್ಯೂಸ್

‘ಆಜ್ ಕಿ ರಾತ್’ ಹಾಡಿಗೆ ತಮನ್ನಾ ಸ್ಟೈಲಲ್ಲೇ ಹುಕ್ ಸ್ಟೆಪ್ ಹಾಕಿದ ಹುಡುಗ | Video Viral

ತಮನ್ನಾ ಭಾಟಿಯಾ ಅವರು ಅದ್ಭುತವಾಗಿ ಸ್ಟೆಪ್​ ಹಾಕಿರುವ ಆಜ್​ ಕಿ ರಾತ್​ ಹಾಡು ಪ್ರಸ್ತುತ ಮಕ್ಕಳು ಮತ್ತು ಯುವಕರ ಮೊದಲ ಆಯ್ಕೆಯಾಗಿದೆ. ಮದುವೆ ಮಾತ್ರವಲ್ಲ ಪಾರ್ಟಿಗಳು ಕೂಡ ಈ ಹಾಡು ಇಲ್ಲದೆ ಅಪೂರ್ಣ ಎನ್ನುವನ್ನು ಫೇಮಸ್​​. ಇವತ್ತು ಡಿಜೆ ಯಾವ ಹಾಡು ಹಾಕಲಿ ಅಂತ ಕೇಳಿದಾಗ ‘ಆಜ್ ಕಿ ರಾತ್’ ಎಂಬುದು ಜನರ ಮೊದಲ ಮನವಿಯಾಗಿರುತ್ತದೆ. ಸದ್ಯ ಇದೇ ಹಾಡಿಗೆ ಹುಡುಗನೊಬ್ಬ ತಮನ್ನಾರಂತೆ ಡ್ಯಾನ್​​​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral)​ ಆಗಿದೆ.

ವೈರಲ್​ ವಿಡಿಯೋದಲ್ಲಿ ಯಾವುದು ಸಮಾರಂಭದಲ್ಲಿ ಜನರು ಒಂದೇ ಸ್ಥಳದಲ್ಲಿ ಜಮಾಯಿಸಿರುವುದನ್ನು ನೀವು ನೋಡಬಹುದು. ಆ ಸಮಯದಲ್ಲಿ ಡ್ಯಾನ್ಸರ್​​ ಇರ್ಫಾನ್ ‘ಆಜ್ ಕಿ ರಾತ್’ ಹಾಡಿಗೆ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. ಅವರ ಡ್ಯಾನ್ಸ್​​​ ಮುಂದುವರಿದಂತೆ ಸಾರ್ವಜನಿಕರು ಖುಷಿಯಿಂದ ನೋಡುತ್ತಾರೆ. ಅನೇಕ ಜನರು ವ್ಯಕ್ತಿಯ ನೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದನ್ನು ಕಾಣಬಹುದು. ಅವರು ತಮನ್ನಾ ಅವರಂತೆ ಹಾಡಿನ ಹುಕ್ ಸ್ಟೆಪ್‌ಗಳನ್ನು ಎಕ್ಸಿಕ್ಯೂಟ್ ಮಾಡುವುದನ್ನು ನೋಡಿ ಎಲ್ಲರೂ ಫಿದಾ ಆಗಿದ್ದಾರೆ.

ಈ ವಿಡಿಯೋವನ್ನು ಇದುವರೆಗೂ 88 ಲಕ್ಷ ಮಂದಿ ವೀಕ್ಷಿಸಿದ್ದಾರೆ. 2 ಲಕ್ಷ 13 ಸಾವಿರ ಮಂದಿ ಲೈಕ್​ ಮಾಡಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಭಾಯ್ ತಮನ್ನಾ ಕೂಡ ಈ ಸ್ಟೆಪ್​ ಹಾಕುವಾಗ ಫೇಲ್ ಆಗಿದ್ದಾರೆ, ಹುಡುಗ ಡ್ಯಾನ್ಸ್ ಮಾಡಿದಂತೆ ಕಾಣುತ್ತಿಲ್ಲ, ಈ ಕಲಾವಿದ ಅದ್ಭುತ ಅವರ ನೃತ್ಯವು ಅದ್ಭುತವಾಗಿದೆ ಎಂದು ಕಾಮೆಂಟ್​​ ಮಾಡಿದ್ದಾರೆ.