ಮುಂಬೈ: ಪೆಟ್ರೋಲ್ ಚಾಲಿತ ವಾಹನಗಳಿಗೆ ಡೀಸೆಲ್ ಹಾಕಿದರೂ ಎಂಜಿನ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಪೆಟ್ರೋಲ್ ಪಂಪ್ ಮಾಲೀಕರು ಅದಕ್ಕೆ ನೀರು ಸೇರಿಸಿದರೆ ಅದು ಗ್ರಾಹಕರ ನಂಬಿಕೆಯನ್ನು ಮುರಿದಂತೆ. ಅಲ್ಲದೆ ವಾಹನದ ಎಂಜಿನ್ ಕೂಡ ಇದರಿಂದ ಹಾಳಾಗುತ್ತದೆ. ಮಹಾರಾಷ್ಟ್ರದ ಪುಣೆಯಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರೊಬ್ಬರು ಪೆಟ್ರೋಲ್ ಪಂಪ್ ಪೆಟ್ರೋಲ್‌ನಲ್ಲಿ ನೀರನ್ನು ಬೆರೆಸಿದೆ ಎಂದು ಆರೋಪಿಸಿದ್ದಾರೆ.(Video Viral)
ಇದನ್ನು ಓದಿ: ‘ಛಾವಾ’ ನೋಡಲು ಸಂಭಾಜಿ ಮಹಾರಾಜ್ ಗೆಟಪ್ನಲ್ಲಿ ಕುದುರೆ ಏರಿ ಬಂದ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..
ಪೆಟ್ರೋಲ್‌ನಲ್ಲಿ ಶೇ.80ರಷ್ಟು ನೀರು ಬೆರೆಸಲಾಗಿದೆ ಎಂದು ಗ್ರಾಹಕರು ಹೇಳುತ್ತಾರೆ. ಆದರೆ ಪೆಟ್ರೋಲ್ ಪಂಪ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಪೆಟ್ರೋಲ್ ಪಂಪ್‌ನಲ್ಲಿ ಹಾಜರಿರುವ ಸಿಬ್ಬಂದಿ ಪೆಟ್ರೋಲ್ ತುಂಬಿಸಲು ಬರುವ ವಾಹನ ಮಾಲೀಕರು ಅಂತಹ ಸಮಸ್ಯೆಗಳನ್ನು ವರದಿ ಮಾಡುವಂತೆ ವಿನಂತಿಸಿದ್ದಾರೆ. ಅಲ್ಲದೆ ತನಿಖೆ ಆರಂಭಿಸುವಂತೆಯೂ ಅವರು ಕೇಳಿದ್ದಾರೆ. ಈ ವೈರಲ್ ವಿಡಿಯೋ ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನದ್ದು ಎಂದು ಹೇಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಪೆಟ್ರೋಲ್‌ನಲ್ಲಿ ಕಲಬೆರಕೆ ಬೆಳಕಿಗೆ ಬಂದಿದೆ. ಶಾಹುನಗರದ ಪೆಟ್ರೋಲ್ ಪಂಪ್‌ನಲ್ಲಿ ಮಹಿಳಾ ಗ್ರಾಹಕಿಯೊಬ್ಬರು ಪೆಟ್ರೋಲ್ ಪಂಪ್ ಬಳಿ ತನ್ನ ದ್ವಿಚಕ್ರ ವಾಹನವನ್ನು ಕೆಳಗೆ ಬೀಳಿಸಿರುವುದನ್ನು ನೋಡಬಹುದು. ತುಂಬಿಸಿದ್ದ ಪೆಟ್ರೋಲ್ ಟ್ಯಾಂಕ್ ಅನ್ನು ಕೆಳಗ ಚೆಲ್ಲುವಂತೆ ಮಾಡಿದ್ದಾರೆ. ಜನರು ಅಲ್ಲಿ ಸುತ್ತುವರಿದಿದ್ದು ಮಹಿಳೆ ಇದರಲ್ಲಿ ಶೇ.80ರಷ್ಟು ನೀರು ಬೆರೆತಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅಲ್ಲಿ ನೆರೆದಿದ್ದ ಜನರು ಕೂಡ ಅದನ್ನೇ ಹೇಳುವುದನ್ನು ಕಾಣಬಹುದು.
ಈ ವಿಡಿಯೋ ನೋಡಿದ ಬಳಿಕ ತೈಲದ ಗುಣಮಟ್ಟ ಮತ್ತು ಗ್ರಾಹಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ಈ ವೈರಲ್ ವಿಡಿಯೋದ ಕುರಿತು ನೆಟ್ಟಿಗರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ ಪೆಟ್ರೋಲ್ ಪಂಪ್ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ ಸಲ್ಲಿಸಲಾಗಿದೆ. 32 ಸೆಕೆಂಡುಗಳ ಈ ವೈರಲ್ ವಿಡಿಯೋವನ್ನು ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ವ್ಯವಹಾರ, ಈ ಪೆಟ್ರೋಲ್ ಪಂಪ್ ನಮ್ಮ ಮನೆಯ ಪಕ್ಕದಲ್ಲೇ ಇದೆ, ಪೆಟ್ರೋಲ್ ಪಂಪ್ 'ಇಂಧನ' ತುಂಬಿಸುವಲ್ಲಿ ಹಗರಣ ಮಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)