ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವಷ್ಟೇ ಮನಸ್ಸಿಗೆ ಹತ್ತಿರವಾಗುವುದರ ಜತೆಗೆ ನಮ್ಮ ಬಾಲ್ಯವನ್ನು ನೆನಪಿಸಿತ್ತವೆ. ಅಂತಹದ್ದೆ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್( Video Viral) ಆಗುತ್ತಿದೆ. ಅದರಲ್ಲಿ 96 ವರ್ಷದ ವ್ಯಕ್ತಿಯೊಬ್ಬರು ತನ್ನ ಮೊಮ್ಮಗಳೊಂದಿಗೆ ಆಟವಾಡುತ್ತಿದ್ದಾರೆ. ಈ ವಿಡಿಯೋ ತುಂಬಾ ಮುದ್ದಾಗಿದ್ದು ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಅನೇಕ ಆಟಿಕೆಗಳನ್ನು ಇಟ್ಟಿರುವುದನ್ನು ನೀವು ನೋಡಬಹುದು. ಮತ್ತು ಮುದ್ದಾದ ಮಗುವೊಂದು ತನ್ನ ಮುತ್ತಜ್ಜನಿಗೆ ಆಟಿಕೆಗಳನ್ನು ನೀಡುತ್ತಿದೆ. ಇಬ್ಬರೂ ಒಟ್ಟಿಗೆ ಬೇರೆ ಬೇರೆ ಆಟಿಕೆಗಳೊಂದಿಗೆ ಆಟವಾಡುತ್ತಿದ್ದಾರೆ. ಆ ಮಗು ಪದೇಪದೆ ಅಜ್ಜ ಎಂದು ಕೂಗುತ್ತಾ ಕೆಲವೊಮ್ಮೆ ಹುಲಿಯನ್ನು ಮತ್ತೆ ಕೆಲವೊಮ್ಮೆ ಸಿಂಹವನ್ನು ತೋರಿಸುವುದನ್ನು ಕಾಣಬಹುದು. ಅಜ್ಜ ಕೂಡ ನಗುತ್ತಾ ಅವಳಿಂದ ಆಟಿಕೆಗಳನ್ನು ತೆಗೆದುಕೊಂಡು ಅವಳೊಂದಿಗೆ ಆಟವಾಡುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಈ ವಿಡಿಯೋವನ್ನು ಇದುವರೆಗೂ 1 ಮಿಲಿಯನ್ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸಿತು, ಇದು ನನ್ನ ಫೀಡ್‌ನಲ್ಲಿರುವ ಅತ್ಯುತ್ತಮ ವಿಡಿಯೋ, ಅವಳು ಎಷ್ಟು ಮುದ್ದಾಗಿದ್ದಾಳೆ ಮತ್ತು ಅವಳ ಮಾತುಗಳು ಇನ್ನೂ ಮುದ್ದಾಗಿವೆ, ಈ ಹುಡುಗಿ ಮೂರು ತಲೆಮಾರುಗಳಿಂದ ಪ್ರೀತಿ ಪಡೆಯುತ್ತಿರುವುದು ತುಂಬಾ ಅದೃಷ್ಟಶಾಲಿ ಎಂದು ಕಾಮೆಂಟ್ ಮಾಡಿದ್ದಾರೆ.