ನ್ಯೂಸ್

VIDEO|ಲವ್ಲೀ ಪ್ರೇಮನಿವೇದನೆಯ ಫನ್ನೀ ಕ್ಷಣಗಳು..

ಪ್ರೇಮಿಗಳ ಬದುಕಿನಲ್ಲಿ ಸ್ಮರಣೀಯ ಕ್ಷಣಗಳೇನಾದರೂ ಇದ್ದರೆ ಅದಲ್ಲಿ ಪ್ರೇಮನಿವೇದನೆಯ ಕ್ಷಣಗಳಿಗೊಂದು ವಿಶೇಷ ಸ್ಥಾನ. ಹೀಗಾಗಿ ಪ್ರೇಮನಿವೇದನೆಯನ್ನು ಸ್ಮರಣೀಯವಾಗಿಸಲು ನವನವೀನ ರೀತಿಯ ಸಾಹಸಗಳಿಗೆ ಮೊರೆ ಹೋಗುತ್ತಾರೆ ಪ್ರೇಮಿಗಳು. ಪ್ರೇಮನಿವೇದನೆಗೆ ಐಡಿಯಾ ಕೊಡುವುದು, ಅದನ್ನು ಅನುಷ್ಠಾನಗೊಳಿಸುವುದು ಕೂಡ ಈ ಉದ್ಯಮ ಸ್ವರೂಪ ಪಡೆದುಕೊಂಡಿದೆ.

ಯಶಸ್ವಿ ಪ್ರೇಮನಿವೇದನೆಗಳ ಪೈಕಿ ಕೆಲವೊಂದು ಆ ಕ್ಷಣದ ಸನ್ನಿವೇಶಗಳಿಂದಾಗಿ ಫನ್ನಿಯಾಗಿ ಮಾರ್ಪಡುವುದುಂಟು. ಆ ವಿಡಿಯೋ ತುಣುಕುಗಳು ವೈರಲ್ ಕೂಡ ಆಗಿಬಿಡುತ್ತವೆ. ಅಂಥದ್ದೇ ಒಂದು ವಿಡಿಯೋ ತುಣುಕು ಇದು. ನ್ಯೂಯಾರ್ಕ್​ನ ಬ್ರೂಕ್ಲಿನ್ ಬ್ರಿಜ್ ಮೇಲೆ ನಡೆದ ಘಟನೆ ಇದು. ಕ್ರಿಸ್ ವಿಗೋ ತನ್ನ ಪ್ರೇಯಸಿಯ ಬಳಿ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿ ಬೆರಳಿಗೆ ಉಂಗುರ ತೊಡಿಸುತ್ತಿದ್ದ ವೇಳೆ ನಡೆಯಿತೊಂದು ಫನ್ನಿಯಾಗಿರುವ ಘಟನೆಯೊಂದು ಕ್ಯಾಮೆರಾದಲ್ಲಿ ನಡೆಯಿತು.

ಆ ಕ್ಷಣಗಳನ್ನು ನೋಡಿಯೇ ಆನಂದಿಸುವುದು ಒಳಿತು.