ನ್ಯೂಸ್

VIDEO: ಕರೊನಾ ನೆಪದಲ್ಲಿ ಹಾಡು ಹೇಳಿದ್ರು ಜನಪ್ರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್

ಬೆಂಗಳೂರು: ಕರೊನಾ ಸೋಂಕು ಹರಡದಂತೆ ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ ಎಂಬ ಅಭಿಯಾನ ಮುಂದುವರಿದಿದೆ. ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಲಾಕ್​ಡೌನ್ ಘೋಷಿಸಿದ್ದು, ರಾಜ್ಯದಲ್ಲೂ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇವುಗಳ ನಡುವೆ ಸೆಲೆಬ್ರಿಟಿಗಳು ತಮ್ಮದೇ ಆದ ದಾರಿಯಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಗಾಯಕರು ಹಾಡು ಹೇಳಿದ್ರೆ, ಸಿನಿಮಾ ನಟ, ನಟಿಯರು ವಿಡಿಯೋ ಸಂದೇಶಗಳನ್ನು ರವಾನಿಸುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನಪ್ರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಹಾಡಿದ ಹಾಡು ಈಗಾಗಲೇ ವೈರಲ್ ಆಗಿದೆ. ಅಲ್ಲಿ ಜಯಂತ ಕಾಯ್ಕಿಣಿ ಸಾಹಿತ್ಯಕ್ಕೆ ಎಸ್​ಪಿಬಿ ಧ್ವನಿಯಾಗಿದ್ದಾರೆ.

ಈಗ ಇದಕ್ಕಿಂತ ಕೊಂಚ ಭಿನ್ನವಾಗಿ ಜನಪ್ರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರು ಕರೊನಾ ನೆಪದಲ್ಲಿ ತಾವೇ ಹಾಡಿ ಅದರ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಇದು ಈಗ ಸಾಹಿತ್ಯ ವಲಯದಲ್ಲಿ ವೈರಲ್ ಆಗುತ್ತಿದೆ. ಆ ಹಾಡಿನ ತುಣುಕು ನಿಮಗಾಗಿ ಇಲ್ಲಿದೆ..