ನವದೆಹಲಿ: ಸವಾರನೊಬ್ಬ ನದಿಯಲ್ಲಿ ಬೈಕ್ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೇನು ತಮಾಷೆ ಮಾಡ್ತಿಲ್ಲ ತಾನೇ ಅಂತ ಅಂದುಕೊಳ್ಳಬೇಡಿ. ಈ ವಿಡಿಯೋ ನೋಡಿದರೆ ನೀವು ಹೌದು ಎನ್ನುತ್ತೀರಿ. ವಿಡಿಯೋ ನೋಡಿ ನೆಟ್ಟಿಗರು ಸಹ ಹುಬ್ಬೇರಿಸಿದ್ದಾರೆ.
ಮೋಟಾರ್ ಆಕ್ಟೇನ್ ಹೆಸರಿನ ಟ್ವಿಟರ್ ಪೇಜ್ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಬೈಕ್ ಮೇಲೆ ಕುಳಿತಿರುವ ವ್ಯಕ್ತಿ ನದಿಯ ಒಳಗೆ ಬೈಕ್ ಇಳಿಸಿಕೊಂಡು ಸುಮಾರು ದೂರದವರೆಗೆ ನದಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿ ಗುರಿ ತಲುಪಿರುವ ದೃಶ್ಯ ಇದೆ.
ಸೂಕ್ತ ಉದಾಹರಣೆಯಂತೆ
ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಈ ವಿಡಿಯೋ ಸೂಕ್ತ ಉದಾಹರಣೆ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಅಲ್ಲದೆ, ಈ ಬಗ್ಗೆ ಆಲೋಚಸಿ, ಇದು ತುಂಬಾ ಬುದ್ಧಿವಂತಿಯೇ? ಅಥವಾ ತುಂಬಾ ಅಪಾಯಕಾರಿಯೇ? ಎಂದು ವಿಡಿಯೋ ಕುರಿತು ಪ್ರಶ್ನಿಸಲಾಗಿದೆ.
ಭಾರೀ ವೀಕ್ಷಣೆ
ಜಾಲತಾಣ ವೇದಿಕೆಯಲ್ಲಿ ವಿಡಿಯೋ ವೈರಲ್ ಆಗಿದೆ. ಈವರೆಗೂ 4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಇಷ್ಟಪಟ್ಟಿದ್ದು, ನೂರಾರು ಮಂದಿ ಕಾಮೆಂಟ್ಗಳ ಮಹಾಪೂರವನ್ನೇ ಹರಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ನಿಸ್ಸಂಶಯವಾಗಿ ಇದು ಅಪಾಯಕಾರಿ. ನೀರು ಎಕ್ಸಾಸ್ಟ್ ಪ್ರವೇಶಿಸಿದರೆ ಎಂಜಿನ್‌ಗೆ ಏನಾಗುತ್ತದೆ? ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಅಪಾಯ ಎನಿಸಿದರೂ ಆತ ಬಹಳ ಬುದ್ಧಿವಂತ ಎಂದು ಮತ್ತೋರ್ವ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯರಿಗೆ ಅವರ ನದಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಅವರು ಬಾಲ್ಯದಿಂದಲೂ ಅಲ್ಲಿ ವಾಸಿಸುತ್ತಿದ್ದಾರೆ. ಇದು ಅಸ್ಸಾಂನಲ್ಲಿ ಸಾಮಾನ್ಯವಾಗಿದೆ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾರೆ. (ಏಜೆನ್ಸೀಸ್)